ಮಂಗಳೂರು; ಆ. ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ಶಾಖೆಯ ಸೇವಾ ವಿಭಾಗವಾದ ಸಮಾಜ ಸೇವಾ ಘಟಕವು ಇಲ್ಲಿನ ವಳಚ್ಚಿಲ್ ಪದವು ಎಂಬ ಪ್ರದೇಶದಲ್ಲಿ ಬಡ ಕುಟುಂಬವೊಂದರ ದುರ್ಬಲ ಮನೆಯನ್ನು ದಾನಿಗಳ ನೆರವಿನಿಂದ ದುರಸ್ತಿಗೊಳಿಸಿ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಹಸ್ತಾಂತರಿಸಿತು.
ಸಮಾಜ ಸೇವಾ ಘಟಕದ ಸದಸ್ಯರಾದ ಅಬ್ದುಲ್ ಕರೀಮ್ ಬೆಂಗರೆ ಸಂದರ್ಭೋಚಿತ ಉಪದೇಶ ನೀಡಿದರು. ಉದ್ಯಮಿ ಮುಹಮ್ಮದ್ ಇಸ್ಹಾಕ್ ಫರಂಗಿಪೇಟೆ, ಶಂಶೀರ್ ಮೆಲ್ಕಾರ್, ಸಿದ್ದೀಕ್ ಜಕ್ರಿಬೆಟ್ಟು ಉಪಸ್ಥಿತರಿದ್ದರು.













