ಒಂದು ವರ್ಷದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‍ಗಳು ಮುಚ್ಚಿದ್ದು 5,500 ಎಟಿಎಂ, 600 ಶಾಖೆಗಳು!

0
947

ಸನ್ಮಾರ್ಗ ವಾರ್ತೆ

ತೃಶೂರ್,ಆ.23: ಕಳೆದ ಒಂದು ವರ್ಷದಲ್ಲಿ ದೇಶದ ಸಾರ್ವಜನಿಕ ವಲಯದ ಬ್ಯಾಂಕುಗಳು 5,500 ಎಟಿಎಂ ಮತ್ತು 600 ಶಾಖೆಗಳನ್ನು ಮುಚ್ಚಿವೆ. ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯ ಕಳೆದ ದಿವಸಗಳಲ್ಲಿ 50 ಶಾಖೆಗಳು ಹಲವಾರು ಎಟಿಎಂಗಳನ್ನು ಮುಚ್ಚಿವೆ. ಇದು ಬಹುದೊಡ್ಡ ಪ್ರತಿಭಟನೆಗೂ ಕಾರಣವಾಗಿದೆ. ಇತರ ಸಾರ್ವಜನಿಕ ವಲಯದ ಬ್ಯಾಂಕುಗಳು ಕೂಡ ಇದೇ ದಾರಿಯಲ್ಲಿವೆ ಎಂದು ಮೊದಲ ಹಂತದ ಅವಲೋಕ ವರದಿಗಳು ತಿಳಿಸಿವೆ.

2018ರ ಜೂನ್‍ನಿಂದ 2019 ಜೂನ್‌ವರೆಗೆ ಸ್ಟೇಟ್‌ಬ್ಯಾಂಕ್ 420 ಶಾಖೆ ಮತ್ತು 768 ಎಟಿಎಂ ಮುಚ್ಚಿದೆ. ವಿಜಯ ಬ್ಯಾಂಕ್, ದೇನಾ ಬ್ಯಾಂಕ್ ವಿಲೀನವಾದ ಬ್ಯಾಂಕ್ ಆಫ್ ಬರೋಡ ಇದೇ ಅವಧಿಯಲ್ಲಿ 274 ಎಟಿಎಂ ಸ್ಥಗಿತಗೊಳಿಸಿದ್ದು, 40ಕ್ಕೂ ಹೆಚ್ಚು ಶಾಖೆಗಳನ್ನೂ ಮುಚ್ಚಿದೆ. ಬ್ಯಾಂಕ್ ಆಫ್ ಇಂಡಿಯ 1,269 ಎಟಿಎಂ 36 ಶಾಖೆಗಳನ್ನು ಮುಚ್ಚಿತ್ತು. ಇಂಡಿಯನ್ ಬ್ಯಾಂಕ್ ಹೊರತು ಪಡಿಸಿ ಎಲ್ಲ ಸಾರ್ವಜನಿಕ ಬ್ಯಾಂಕುಗಳು ಇದೇ ಹಾದಿಯಲ್ಲಿ ಸಾಗಿದ್ದರೆ, ಖಾಸಗಿ ಬ್ಯಾಂಕ್‍ಗಳಾದ ಎಚ್‍ಡಿಎಫ್‍ಸಿ, ಐಸಿಐಸಿಐ, ಆಕ್ಸಿಸ್ ಸಹಿತ ಬ್ಯಾಂಕುಗಳು ನಗರಗಳಲ್ಲಿ ತಮ್ಮ ಶಾಖೆಗಳು ಮತ್ತು ಎಟಿಎಂ ಸಂಖ್ಯೆಯನ್ನು ಹೆಚ್ಚಿಸುತ್ತಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ಬ್ಯಾಂಕ್‍ಗಳ ಶಾಖೆಗಳು ತೀರ ವಿರಳವಾಗಿದೆ.