70 ವರ್ಷಗಳಲ್ಲಿ ದೊಡ್ಡ ಬಿಕ್ಕಟ್ಟು; ಸರಕಾರ ಮಧ್ಯ ಪ್ರವೇಶಿಸಬೇಕು- ನೀತಿ ಆಯೋಗ್ ಉಪಾಧ್ಯಕ್ಷ

0
911

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಆ. 23: ಅತಿ ದೊಡ್ಡ ಹಣಕ್ಷಾಮ ಹಣಕಾಸು ಕ್ಷೇತ್ರ ಎದುರಿಸುತ್ತಿದೆ. ಕಳೆದ ಎಪ್ಪತ್ತು ವರ್ಷಗಳಲ್ಲೇ ಅತೀ ದೊಡ್ಡ ಬಿಕ್ಕಟು ಇದು ಎಂದು ನೀತಿ ಆಯೋಗ್ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳಿದ್ದು ಐಎನ್‍ಎಗೆ ನೀಡಿದ ಸಂದರ್ಶನದಲ್ಲಿ ಈ ವಿವರ ನೀಡಿದ್ದಾರೆ.

ಖಾಸಗಿ ಕ್ಷೇತ್ರದಲ್ಲಿ ನೆಲೆಯಾದ ಆತಂಕ ಬಗೆಹರಿಸಲು ಸರಕಾರದಿಂದ ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಮಸ್ಯೆ ಇದೆ ಎಂದು ಸರಕಾರ ಅರಿಯಬೇಕು. ಠೇವಣಿ ಸಮಸ್ಯೆ ಹಲವು ಸಂಸ್ಥೆಗಳು ಎದುರಿಸುತ್ತಿದ್ದು ದಿವಾಳಿಯಾಗುವ ಪರಿಸ್ಥಿತಿಗೆ ತಲುಪಿದೆ. ಇದನ್ನು ಹೇಗಾದರೂ ಮಾಡಿ ತಡೆಯಲೇ ಬೇಕಾಗಿದೆ ಎಂದು ರಾಜೀವ್ ಕುಮಾರ್ ಹೇಳಿದರು.

ಆರ್ಥಿಕ ವ್ಯವಸ್ಥೆಯಲ್ಲಿ ಯಾರೂ ಯಾರನ್ನೂ ನಂಬದ ಪರಿಸ್ಥಿತಿ ಇದೆ. ಖಾಸಗಿ ಕ್ಷೇತ್ರದಲ್ಲಿ ಮತ್ತು ಸಾರ್ವಜಿನಿಕ ಕ್ಷೇತ್ರದಲ್ಲಿ ಇದೇ ಪರಿಸ್ಥಿತಿ ಇದೆ. ಸಾಲ ಕೊಡಲು ಯಾರೂ ತಯಾರಿಲ್ಲ. ಇದೇ ಮೊದಲ ಸಲ ಸರಕಾರದ ಒಬ್ಬ ವ್ಯಕ್ತಿ ಆರ್ಥಿಕ ಬಿಕ್ಕಟ್ಟನ್ನು ಸಮ್ಮತಿಸಿರುವುದು ಗಮನಾರ್ಹವಾಗಿದೆ.