ಅನರ್ಹ ಶಾಸಕರ ಅರ್ಜಿ: ತ್ವರಿತ ವಿಚಾರಣೆಗೆ ಸುಪ್ರೀಂಕೋರ್ಟ್ ನಕಾರ

0
518

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಆ. 26: ಕರ್ನಾಟಕದ ಸ್ಪೀಕರ್ ಆಗಿದ್ದ ರಮೇಶ್‍ ಕುಮಾರ್ ಅನರ್ಹಗೊಳಿಸಿದ ಅತೃಪ್ತ ಶಾಸಕರು ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆ ನಡೆಸಲು ಸುಪ್ರೀಂಕೋರ್ಟು ನಿರಾಕರಿಸಿದೆ. ಜಸ್ಟಿಸ್ ಎನ್.ವಿ.ರಮಣ ನೇತೃತ್ವದ ಸುಪ್ರೀಂಕೋರ್ಟು ಪೀಠ ಅನರ್ಹ ಶಾಸಕರ ಮನವಿಯನ್ನು ನಿರಾಕರಿಸಿದ್ದು ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲಿ ಸಚಿವ ಆಕಾಂಕ್ಷಿಂಗಳಾದ ರಮೇಶ್ ಜಾರಕಿಹೊಳಿ, ಬಿ.ಸಿ.ಪಾಟೀಲ್ ಸಹಿತ ಹಲವರು ಸುಪ್ರೀಂಕೋರ್ಟ್ ನಿಲುವಿನಿಂದಾಗಿ ಹಿನ್ನಡೆ ಅನುಭವಿಸಬೇಕಾಯಿತು. ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ತುರ್ತು ವಿಚಾರಣೆ ನಡೆಸುವಂತೆ ತನ್ನ ಜೂನಿಯರ್ ವಕೀಲರ ಮೂಲಕ ಮನವಿ ಸಲ್ಲಿಸಿದ್ದರು. ಆದರೆ ಸುಪ್ರೀಂ ಕೋರ್ಟು ಶೀಘ್ರ ವಿಚಾರಣೆ ಎಂಬ ಬೇಡಿಕೆಯನ್ನು ತಳ್ಳಿ ಹಾಕಿತು.