ನನಗೆ ಯಾರೂ ಕಲಿಸಬೇಕಿಲ್ಲ; ತನ್ನಂತೆ ಯಾರೂ ಬಿಜೆಪಿಯನ್ನು ವಿರೋಧಿಸಿಲ್ಲ- ಶಶಿತರೂರ್

0
511

ಸನ್ಮಾರ್ಗ ವಾರ್ತೆ

ತಿರುವನಂತಪುರಂ,ಆ.26: ಪ್ರತಿಪಕ್ಷ ನಾಯಕ ರಮೇಶ್ ಚೆನ್ನಿತ್ತರಲ ಹೇಳಿಕೆಗೆ ಪ್ರತಿಕ್ರಿಯಿಸಿದ ಶಶಿತರೂರ್ ತನಗೆ ಯಾರೂ ಪಾಠ ಕಲಿಸಬೇಕಾಗಿಲ್ಲ. ಕಾಂಗ್ರೆಸ್‌ನಲ್ಲಿ ಇತರರಿಗಿಂತ ಹೆಚ್ಚು ಬಿಜೆಪಿಯನ್ನು ವಿರೋಧಿಸಿದವನು ತಾನು. ಮೋದಿಯನ್ನು ಬಲವಾಗಿ ವಿರೋಧಿಸಿ ಗ್ರಂಥವನ್ನೇ ಬರೆದವನು ನಾನು. ಒಳ್ಳೆಯದ್ದನ್ನು ಮಾಡಿದರೆ ಯಾವುದೇ ಮುಲಾಜಿಲ್ಲದೆ ಹೇಳುವೆ. ಆದರೆ ಬಿಜೆಪಿಯ ವಿರುದ್ಧ ತನ್ನ ಟೀಕೆ ಟಿಪ್ಪಣಿಗಳನ್ನು ಮುಂದುವರಿಸುತ್ತೇನೆ. ಬಿಜೆಪಿಯನ್ನು ತಾನು ವಿರೋಧಿಸಿದಷ್ಟು ಬೇರೆ ಯಾರೂ ವಿರೋಧಿಸಿಲ್ಲ. ಪಾರ್ಲಿಮೆಂಟಿನ ಒಳಗೆ ಮತ್ತು ಹೊರಗೆ ಬಿಜೆಪಿಯನ್ನು ಬಲವಾಗಿ ಟೀಕಿಸಿದ್ದಿದೆ. ಮಾಹಿತಿ ಹಕ್ಕಿನಲ್ಲಿ ತಿದ್ದುಪಡಿ ಮಾಡಿದ್ದನ್ನು ವಿರೋಧಿಸಿ ತಾನು ಪಾರ್ಲಿಮೆಂಟಿನಲ್ಲಿ ಮಾತಾಡಿದ್ದೇನೆ. ತಾನು ಹೇಳಿದ್ದು ಏನೆಂದು ಅರ್ಥಮಾಡಿಕೊಳ್ಳದೆ ಟೀಕಿಸಬೇಡಿ. ಕೇವಲ ಕೇರಳವನ್ನು ಮಾತ್ರ ಚಿಂತಿಸುವವರಿಗೆ ಇದೆಲ್ಲ ಅರ್ಥವಾಗುವುದಿಲ್ಲ ಎಂದು ತರೂರ್ ಹೇಳಿದರು.

ಕೇಸಿಗೆ ಹೆದರಿ ಹೀಗೆ ಮಾಡುವುದಿದ್ದರೆ ಈ ಹಿಂದೆಯೇ ತನಗೆ ನಿಲುವು ಕೈಗೊಳ್ಳಬಹುದಾಗಿತ್ತು. ತನ್ನ ವಿರುದ್ಧ ಇರುವ ಮೂರು ಕೇಸುಗಳಲ್ಲಿ ಎರಡು ಬಿಜೆಪಿ ವಿರುದ್ಧ ಮಾತಾಡಿದ್ದಕ್ಕಾಗಿ ಇರುವಂತಹವು. ತನ್ನ ಪ್ರಕರಣವನ್ನು ತಾನೇ ನಡೆಸುತ್ತಿದ್ದೇನೆ. ಜಯರಾಂ ರಮೇಶ್, ಅಭಿಶೇಕ್ ಸಿಂಘ್ವಿ ಹೇಳಿದ್ದರಲ್ಲಿ ತಪ್ಪಿಲ್ಲ. ಮೋದಿ ಏನಾದರೂ ಒಳ್ಳೆಯದು ಮಾಡಿದ್ದರೆ ಅದನ್ನು ಒಪ್ಪದಿದ್ದರೆ ಜನರ ಮಧ್ಯೆ ವಿಶ್ವಾಸ ಕಳಕೊಳ್ಳುತ್ತೇವೆ. ಅಗತ್ಯವೆದರುರಾದಾಗ ಮೋದಿಯನ್ನು ಕಟುವಾಗಿ ಟೀಕಿಸಬೇಕೆಂದು ಅವರು ಪತ್ರತರ್ಕರಿಗೆ ಹೇಳಿದರು. “ಸಾವಿರ ತಪ್ಪು ಮಾಡಿದ ಬಳಿಕ ಒಂದು ಸರಿಯಾಗಿದ್ದನ್ನು ಮಾಡಿದರೆಂದು ಮೋದಿಯನ್ನು ಎತ್ತಿಹಿಡಿಯುವ ಆವಶ್ಯಕತೆಯಿಲ್ಲ. ಯಾರು ಹೇಳಿದರೂ ಮೋದಿಯ ಕೆಟ್ಟ ಕೆಲಸಗಳನ್ನು ಅಡಗಿಸಲು ಸಾಧ್ಯವಿಲ್ಲ” ಎಂದು ರಮೇಶ್ ಚೆನ್ನಿತ್ತಲ ಹೇಳಿದ್ದಾರೆ.