ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಆ. 26: ಜಮ್ಮುಕಾಶ್ಮೀರ ವಿಷಯದಲ್ಲಿ ಕೇಂದ್ರ ಸರಕಾರದ ವಿರುದ್ಧ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಉಗ್ರ ಟೀಕೆ ಮಾಡಿದ್ದಾರೆ. ಕಾಶ್ಮೀರಿಗಳ ಪ್ರಜಾಪ್ರಭುತ್ವವಾದಿ ಹಕ್ಕುಗಳನ್ನು ಹನನ ಮಾಡುವುದಕ್ಕಿಂತ ದೊಡ್ಡ ದೇಶ ವಿರೋಧಿ ಕೃತ್ಯ ಬೇರೆ ಇಲ್ಲ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ವಿಮಾನ ನಿಲ್ದಾಣದಲ್ಲಿ ರಾಹುಲ್ ಗಾಂಧಿಯವರೊಡನೆ ತನ್ನ ಸಂಕಷ್ಟವನ್ನು ಹೇಳಿಕೊಂಡು ಅತ್ತ ಕಾಶ್ಮೀರಿ ಮಹಿಳೆಯ ವೀಡಿಯೊ ಶೇರ್ ಮಾಡಿ ಪ್ರಿಯಾಂಕಾ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಷ್ಟ್ರೀಯತೆಯ ಹೆಸರಿನಲ್ಲಿ ದಮನಿಸಲಾದ ಮತ್ತು ಮೌನಿಗಳನ್ನಾಗಿಸಿದ ಲಕ್ಷಾಂತರ ಜನರಲ್ಲಿ ಒಬ್ಬರು ಮಾತ್ರ ವೀಡಿಯೊದಲ್ಲಿದ್ದಾರೆ. ಎಷ್ಟು ಸಮಯ ಇದು ಮುಂದುವರಿಯಲಿದೆ ಎಂದು ಪ್ರಿಯಾಂಕಾ ಪ್ರಶ್ನಿಸಿದರು. ಇದರ ವಿರುದ್ಧ ಧ್ವನಿಯೆತ್ತಬೇಕಾದದ್ದು ನಮ್ಮೆಲ್ಲರ ಹೊಣೆಯಾಗಿದೆ. ಆದರೆ ನಾವು ಅದನ್ನು ಮಾಡುತ್ತಿಲ್ಲ. ಪ್ರತಿಪಕ್ಷ ಕಾಶ್ಮೀರ ವಿಷಯವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸುವವರಿಗಾಗಿ ಎಂದು ರಾಹುಲ್ರ ಮುಂದೆ ದೀನತೆಯಿಂದ ಅಳುವ ಮಹಿಳೆಯ ವೀಡಿಯೊವನ್ನು ಪ್ರಿಯಾಂಕಾ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಸಹಿತ ಪ್ರತಿಪಕ್ಷ ನಾಯಕರನ್ನು ಕಾಶ್ಮೀರಕ್ಕೆ ಹೋಗದಂತೆ ವಿಮಾನ ನಿಲ್ದಾಣದಲ್ಲಿ ತಡೆಹಿಡಿದ ನಂತರ ವೀಡಿಯೊಂದಿಗೆ ಪ್ರಿಯಾಂಕಾ ಪ್ರತಿಕ್ರಿಯಿಸಿದ್ದಾರೆ.
there is NOTHING more ‘political’ and ‘anti national’ than the shutting down of all democratic rights that is taking place in Kashmir. It is the duty of every one of us to raise our voices against it, we will not stop doing so.
— Priyanka Gandhi Vadra (@priyankagandhi) August 25, 2019












