ಸನ್ಮಾರ್ಗ ವಾರ್ತೆ
ಶ್ರೀನಗರ,ಆ. 29: ಕಾಶ್ಮೀರದಲ್ಲಿ ಹೇರಲಾದ ನಿಯಂತ್ರಣವನ್ನು ಸಡಿಲಿಕೆ ಮಾಡಿದ ಸ್ಥಳಗಳಲ್ಲಿ ಬುಧವಾರ ಹೈಸ್ಕೂಲುಗಳು ತೆರೆದರೂ ಮಕ್ಕಳು ಹಾಜರಾಗಿಲ್ಲ. ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸಿದ ಬೆನ್ನಿಗೆ ಕಠಿಣ ನಿಯಂತ್ರಣವನ್ನು ಹೇರಲಾಗಿತ್ತು. ಮೂರು ವಾರಗಳಿಂದ ಹೈಸ್ಕೂಲ್‍ಗಳು ಮುಚ್ಚಿದ್ದವು.
ಹೈಸ್ಕೂಲಿಗೆ ಕೆಲವು ಸಿಬ್ಬಂದಿಗಳು ಹಾಜರಾಗಿದ್ದರು. ಇದೇ ವೇಳೆ, ಪ್ರಾಥಮಿಕ ಶಾಲೆಗಳಲ್ಲಿ ಒಂದು ವಾರದಿಂದ ಅಧ್ಯಾಪಕರ ಹಾಜರಾತಿ ಉತ್ತಮಗೊಂಡಿದೆ ಎಂದು ಕಾಶ್ಮೀರ ಶಿಕ್ಷಣಾಧಿಕಾರಿ ಯೂನುಸ್ ಮಾಲಿಕ್ ಹೇಳಿದ್ದರು. ನಿಯಂತ್ರಣ ಸಡಲಿಕೆಯಾದ ಸ್ಥಳಗಳಲ್ಲಿ ಫೋನ್ ಸಂಪರ್ಕ ಮರುಸ್ಥಾಪಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.












