ಸನ್ಮಾರ್ಗ ವಾರ್ತೆ
ಲಿಮ,ಆ.29: ಲ್ಯಾಟಿನ್ ಅಮೆರಿಕದ ಪೆರು ದೇಶದಲ್ಲಿ ಬಲಿ ನೀಡಲಾಗಿದ್ದ 227 ಮಕ್ಕಳ ಅವಶೇಷಗಳು ಪತ್ತೆಯಾಗಿದೆ. 4 ವರ್ಷದಿಂದ 14 ವರ್ಷದವರೆಗಿನ ಮಕ್ಕಳ ಮೃತದೇಹದ ಅವಶೇಷಗಳಾಗಿದ್ದು, ಚಿಮು ನಾಗರಿಕತೆ ಕಾಲದಲ್ಲಿ ಬಲಿ ನೀಡಲಾದ ಮಕ್ಕಳ ಅವಶೇಷಗಳು ಇವೆಂದು ಹೇಳಲಾಗಿದೆ.
ಇತಿಹಾಸದ ಅತೀದೊಡ್ಡ ಮಕ್ಕಳ ಬಲಿಯ ಅವಶೇಷಗಳು ಇವೆಂದು ಪ್ರಾಚ್ಯವಸ್ತು ಸಂಶೋಧಕರು ತಿಳಿಸಿದ್ದಾರೆ.ಎಲ್ನಿನೊ ದೇವತೆಯ ಸಂಪ್ರೀತಿ ಗಳಿಸಲು ಮಕ್ಕಳ ಬಲಿ ನೀಡಲಾಗಿರಬಹುದು. ಸಮುದ್ರದ ಎದುರು ನಿಲ್ಲಿಸಿ ಬಲಿ ನೀಡಲಾಗಿತ್ತು ಎಂದು ಅಂದಾಜಿಸಲಾಗಿದೆ. ಕೆಲವು ಅವಶೇಷಗಳಲ್ಲಿ ಈಗಲೂ ಕೂದಲು ಮತ್ತು ಚರ್ಮ ಇವೆ. ಮಳೆಗಾಳದಲ್ಲಿ ಬಲಿ ನಡೆದಿರಬಹುದು ಎಂದು ಪ್ರಾಚ್ಯವಸ್ತು ಸಂಶೋಧಕರು ಅಂದಾಜಿಸಿದ್ದಾರೆ.
ಕಳೆದ ವರ್ಷದಿಂದ ಹ್ಯೂವಾನ್ ಚಾಕೊ ಪ್ರದೇಶದಲ್ಲಿ ಸಂಶೋಧಕರು ಖನನ ನಡೆಸುತ್ತಿದ್ದಾರೆ. ಇನ್ನೂ ಹಲವು ಮಕ್ಕಳ ಮೃತದೇಹಗಳ ಅವಶೇಷ ಸಿಗುವ ಸಾಧ್ಯತೆ ಇದೆ ಎಂದು ಅವರು ನಿರೀಕ್ಷೆ ವ್ಯಕ್ತಪಡಿಸಿದ್ದಾರೆ. 2018ರ ಜೂನ್ನಲ್ಲಿ ಇಲ್ಲಿಗೆ ಸಮೀಪದಲ್ಲಿ ನಡೆಸಿದ ಖನನದಲ್ಲಿ 52 ಅಸ್ತಿಪಂಜರಗಳು ಸಿಕ್ಕಿದ್ದವು. ಪೆರು ಸಮುದ್ರ ತಟದಿಂದ ಇಕ್ವಡೋರ್ವರೆಗೆ ಚಿಮು ನಾಗರಿಕತೆ ಇತ್ತು. ಇದು 1475ರಲ್ಲಿ ಇಂಕೊ ಸಾಮ್ರಾಜ್ಯ ಸ್ಥಾಪನೆಯೊಂದಿಗೆ ಕೊನೆಗೊಂಡಿತ್ತು.












