ಕಾಶ್ಮೀರದ ಹೆಣ್ಣುಮಕ್ಕಳನ್ನು ಮದುವೆಯಾದ ಬಿಹಾರದ ಸಹೋದರರ ಬಂಧನ

0
719

ಸನ್ಮಾರ್ಗ ವಾರ್ತೆ

ಸುಪೋಲ್(ಬಿಹಾರ),ಆ.30: ಕಾಶ್ಮೀರಿ ಹೆಣ್ಣು ಮಕ್ಕಳನ್ನು ಮದುವೆಯಾದ ಬಿಹಾರದ ಸಹೋದರರನ್ನು ಬಂಧಿಸಲಾಗಿದೆ. ಹೆಣ್ಣು ಮಕ್ಕಳನ್ನು ಅಪಹರಿಸಲಾಗಿದೆ ಎಂದು ತಂದೆ ನೀಡಿದ ದೂರಿನ ಆಧಾರದಲ್ಲಿ ಎರಡು ರಾಜ್ಯಗಳ ಪೊಲೀಸರು ಕಾರ್ಯಾಚರಣೆ ನಡೆಸಿ ಬಿಹಾರದ ರಾಮ್‌ವಿಷ್ಣುಪುರ ನಿವಾಸಿಗಳಾದ ಪರ್ವೇಝ್ ಆಲಂ, ತಬ್ರೇಝ್ ಆಲಂ ಸಹೋದರರನ್ನು ಬಂಧಿಸಿದ್ದಾರೆ.

ಕಾಶ್ಮೀರದ ರಂಪಾನಿಯಲ್ಲಿ ಬಡಗಿ ಕೆಲಸ ಮಾಡುತ್ತಿದ್ದ ಇಬ್ಬರು ಸಹೋದರಿಯರನ್ನು ಪ್ರೀತಿಸುತ್ತಿದ್ದರು. ನಂತರ ಬಿಹಾರದಲ್ಲಿ ಮದುವೆಯಾಗಿದ್ದರು. ಹೆಣ್ಣುಮಕ್ಕಳ ಮನೆಯ ವಿರೋಧ ವ್ಯಕ್ತವಾದ ಬಳಿಕ ಇಬ್ಬರನ್ನೂ ಕಾಶ್ಮೀರದ ಅವರ ಮನೆಗೆ ಕಳುಹಿಸಿಕೊಡಲಾಗಿತ್ತು. ತದನಂತರ ಹೆಣ್ಣುಮಕ್ಕಳ ತಂದೆ ತಮ್ಮ ಮಕ್ಕಳನ್ನು ಅಪಹರಿಸಲಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದರು.