ಯಾರಿಗೂ ಭಾರತದ ಗಡಿ ದಾಟಲು ಸಾಧ್ಯವಿಲ್ಲ- ಅಮಿತ್ ಶಾ

0
593

ಸನ್ಮಾರ್ಗ ವಾರ್ತೆ

ಗಾಂಧಿನಗರ,ಆ.30: ಪುಲ್ವಾಮ ಭಯೋತ್ಪಾದನ ದಾಳಿಯ ಬಳಿಕ ಪಾಕ್ ಭಯೋತ್ಪಾದಕರ ಶಿಬಿರದ ಮೇಲೆ ಭಾರತ ನಡೆಸಿದ ವಾಯುದಾಳಿಯ ಬಳಿಕ ದೇಶದ ಗಡಿಯನ್ನು ಯಾರಿಂದಲೂ ಉಲ್ಲಂಘಿಸಲು ಸಾಧ್ಯವಿಲ್ಲ ಎನ್ನುವುದನ್ನು ದೃಡಪಡಿಸಿದೆ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಅವರು ಗಾಂಧಿನಗರದಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪೆಟ್ರೋಲಿಯಂ ಯುನಿವರ್ಸಿಟಿಯಲ್ಲಿ ನಡೆದ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದರು. ಭಾರತ ಶಾಂತಿಯನ್ನು ಬೆಂಬಲಿಸುತ್ತದೆ.ಆದರೆ ಸುರಕ್ಷೆಗೆ ಬೆದರಿಯಾದರೆ ತಿರುಗೇಟು ನೀಡುತ್ತದೆ ಎಂದು ಸೂಚಿಸುವುದಕ್ಕಾಗಿ ಬಾಲಕೋಟ್ ವಾಯುದಾಳಿ ಮಾಡಲಾಯಿತು ಎಂದು ಅಮಿತ್ ಶಾ ಹೇಳಿದರು. ತನ್ನ ಲೋಕಸಭಾ ಕ್ಷೇತ್ರ ಗಾಂಧಿನಗರಕ್ಕೆ ಬಂದ ಅಮಿತ್ ಶಾ ಅಭಿವೃದ್ಧಿ ಕೆಲಸಗಳ ಅವಲೋಕನ ನಡೆಸಿದರು.