ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.6: ಆಮ್ ಆದ್ಮಿ ಪಾರ್ಟಿ ಭಿನ್ನಮತೀಯ ಶಾಸಕಿ ಅಲ್ಕಾ ಲಂಬಾ ಪಕ್ಷ ತೊರೆದಿದ್ದಾರೆ. ಎಎಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ಅವರು ರಾಜೀನಾಮೆ ನೀಡಿರುವುದಾಗಿ ಟ್ವಿಟರ್ ಮೂಲಕ ತಿಳಿಸಿದರು. “ಎಎಪಿಗೆ ಗುಡ್ ಬೈ ಹೇಳಬೇಕಾದ ಸಮಯ ಇದು. ಎಎಪಿಯಲ್ಲಿ ಆರು ವರ್ಷದ ಯಾತ್ರೆಯಲ್ಲಿ ಮಹತ್ತರವಾದ ಹಲವು ವಿಷಯಗಳನ್ನು ಕಲಿಯಲು ಸಾಧ್ಯವಾಗಿದೆ. ಎಲ್ಲರಿಗೂ ಕೃತಜ್ಞತೆಗಳು” ಎಂದು ಅಲ್ಕಾ ಟ್ವೀಟ್ ಮಾಡಿದ್ದಾರೆ.
ಸೆಪ್ಟಂಬರ್ ಮೂರರಂದು ಅಲ್ಕಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಭೇಟಿಯಾಗಿದ್ದರು. ಎಎಪಿಯಿಂದ ದೂರವಿದ್ದು ಪಕ್ಷೇತರಳಾಗಿ ವಿಧಾನಸಭೆಗೆ ಸ್ಪರ್ಧಿಸುವೆ ಎಂದು ಆಗಸ್ಟ್ನಲ್ಲಿ ಘೋಷಿಸಿದ್ದರು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಎಎಪಿ ನಾಯಕರೊಂದಿಗೆ ಅತೃಪ್ತಿಯನ್ನು ಹೊಂದಿರುವ ಅಲ್ಕಾ ಲೋಕಸಭಾ ಚುನಾವಣೆ ಪ್ರಚಾರಕ್ಕೂ ಹೋಗಿರಲಿಲ್ಲ.
ಮಾಜಿ ಪ್ರಧಾನಿ ರಾಜೀವ್ ಗಾಂಧಿಗೆ ನೀಡಿದ ಭಾರತ್ ರತ್ನ ಪ್ರಶಸ್ತಿ ವಾಪಸು ಪಡೆಯಲು ವಿಧಾನಸಭೆಯಲ್ಲಿ ಮಂಡಿಸಿದ್ದನ್ನು ಪ್ರತಿಭಟಿಸಿ ಸುದ್ದಿ ಮಾಡಿದ್ದರು. ಆಗಲೇ ಅವರು ಕಾಂಗ್ರೆಸ್ಸಿಗೆ ಮರಳಲಿದ್ದಾರೆ ಎಂಬ ಸುದ್ದಿ ಹರಡಿತ್ತು. ಕಾಂಗ್ರೆಸ್ಸಿನಲ್ಲಿದ್ದ ಅಲ್ಕಾ 2014 ಡಿಸೆಂಬರ್ನಲ್ಲಿ ಎಎಪಿಗೆ ಸೇರ್ಪಡೆಯಾಗಿದ್ದರು. ಎರಡು ತಿಂಗಳ ಬಳಿಕ ನಡೆದ ವಿಧಾನಸಭಾ ಚುನಾವಣೆಯಲ್ಲಿ ಶಾಸಕಿಯಾಗಿ ಚುನಾಯಿತರಾಗಿದ್ದರು.












