ಬಿಕ್ಕಟ್ಟು ಎದುರಿಸುತ್ತಿರುವ ವಾಹನ ನಿರ್ಮಾಣ ಕ್ಷೇತ್ರ: ಇಪ್ಪತ್ತು ವರ್ಷಗಳಲ್ಲೇ ವಾಹನ ಮಾರಾಟದಲ್ಲಿ ಭಾರೀ ಕುಸಿತ!

0
690

ಸನ್ಮಾರ್ಗ‌ ವಾರ್ತೆ

ಹೊಸದಿಲ್ಲಿ,ಸೆ.9: ದೇಶದ ವಾಹನ ನಿರ್ಮಾಣ ಕ್ಷೇತ್ರ ಭಾರೀ ಬಿಕ್ಕಟ್ಟಿಗೊಳಗಾಗಿದ್ದು ಆಗಸ್ಟ್ ತಿಂಗಳಲ್ಲಿ ಮಾರಾಟದ ಲೆಕ್ಕಗಳು ಇಪ್ಪತ್ತು ವರ್ಷಗಳಲ್ಲಿಯೇ ಅತಿ ಹೆಚ್ಚು ಮಾರಾಟ ಕುಸಿತವನ್ನು ಕಳೆದ ತಿಂಗಳು ದಾಖಲಿಸಿದ್ದನ್ನು ತೋರಿಸಿವೆ. ದ್ವಿಚಕ್ರ ವಾಹನ ಮಾರಾಟ ಮೂರು ವರ್ಷಗಳಲ್ಲಿ ಅತ್ಯಂತ ಸಂದಿಗ್ಧ ಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದಾಗ 31.7 ಶೇಕಡಾ ಪ್ರಯಾಣ ವಾಹನ ಮಾರಾಟದಲ್ಲಿ ಕುಸಿತವಾಗಿದೆ.

ಈ ವರ್ಷ ಆಗಸ್ಟ್‌ವರೆಗೆ 1,96,524 ವಾಹನಗಳ ಮಾರಾಟವಾಗಿದ್ದರೆ ಕಳೆದ ವರ್ಷ ಇದೇ ಸಮಯದಲ್ಲಿ 2,87,198 ವಾಹನಗಳು ಮಾರಾಟಗೊಂಡಿದ್ದವು. ಕಾರು ಮಾರಾಟದಲ್ಲಿ ಅತ್ಯಂತ ಕುಸಿತವಾಗಿದ್ದು 41.09 ಶೇಕಡಾ ಪ್ರಮಾಣದ ಬೃಹತ್ ಕುಸಿತ ಕಂಡು ಬಂದಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ 1,96,847 ಕಾರುಗಳ ಮಾರಾಟಗೊಂಡಿದ್ದವು ಆದರೆ, ಈ ವರ್ಷ 1,15,957 ಕಾರುಗಳು ಮಾರಾಟ ಆಗಿವೆ.

ದ್ವಿಚಕ್ರ ವಾಹನದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 22.24 ಶೇಕಡಾ ಕಡಿಮೆ ಮಾರಾಟ ಕಂಡಿವೆ. ಆಗಸ್ಟಿನಲ್ಲಿ 15,14,196 ಮಾರಾಟವಾಗಿದ್ದರೆ ಕಳೆದ ವರ್ಷ 19,47,304 ದ್ವಿಚಕ್ರ ವಾಹನಗಳು ಮಾರಾಟಗೊಂಡಿದ್ದವು.  ಮಧ್ಯಮ,ಘನ ವಾಣಿಜ್ಯ ವಾಹನಗಳ ಮಾರಾಟದಲ್ಲಿಯೂ ಬಾರೀ ಕುಸಿತವಾಗಿ, ಈ ವಿಭಾಗದಲ್ಲಿ 54.3 ಶೇಕಡಾ ವಾಹನಗಳ ಮಾರಾಟ ಕುಸಿತವಾಗಿದೆ.  ಕಳೆದ ವರ್ಷ ಆಗಸ್ಟ್‌ನಲ್ಲಿ 34,073 ಮಾರಾಟವಾಗಿದ್ದರೆ, ಈ ವರ್ಷ ಆಗಸ್ಟ್‌ ‌ನಲ್ಲಿ 15,573 ವಾಹನಗಳು ಮಾರಾಟವಾಗಿವೆ.  ವಾಣಿಜ್ಯೋದ್ಯಮ ವಾಹನ ಮಾರಾಟದಲ್ಲಿಯೂ ಶೇ. 28,21ರಷ್ಟು ಮಾರಾಟ ಕುಸಿತ ಕಂಡು ಬಂದಿದೆ.  ಒಟ್ಟು 97,32,040 ವಾಹನ ಈ ವರ್ಷ ಆಗಸ್ಟ್‌ನಲ್ಲಿ ಮಾರಾಟಗೊಂಡಿದ್ದವು.  ಕಳೆದ ವರ್ಷ ಆಗಸ್ಟ್‌ನಲ್ಲಿ 115,70,401 ವಾಹನಗಳ ಮಾರಾಟ ನಡೆದಿತ್ತು.ಆದರೆ ಇಲ್ಲಿಯೂ ಶೇ.15.89ರಷ್ಟು ವಾಹನ ಮಾರಾಟದಲ್ಲಿ ಕುಸಿತ ಆಗಿದೆ.