ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.14: ಉದ್ಯಮಿ ಮುಕೇಶ್ ಅಂಬಾನಿ ಕುಟುಂಬಕ್ಕೆ ಆದಾಯ ತೆರಿಗೆ ಇಲಾಖೆ ನೋಟಿಸು ನೀಡಿದೆ ಎಂದು ವರದಿಯಾಗಿದೆ. ವಿದೇಶಿ ಬ್ಯಾಂಕ್ಗಳ ಹೂಡಿಕೆ ಸಂಬಂಧಿಸಿ ವಿವರ ಕೇಳಿ ನೋಟಿಸು ನೀಡಲಾಗಿದೆ. ಮುಕೇಶ್ ಅಂಬಾನಿ, ಪತ್ನಿ ನೀತಾ ಅಂಬಾನಿ, ಮಕ್ಕಳು ಆಕಾಶ್ ಅಂಬಾನಿ, ಆನಂದ್ ಅಂಬಾನಿ, ಉಷಾ ಅಂಬಾನಿಗೆ ಆದಾಯ ತೆರಿಗೆ ಇಲಾಖೆ ನೋಟಿಸು ನೀಡಿದೆ ಎಂದು ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
2019 ಮಾರ್ಚ್ 28ಕ್ಕೆ ಆದಾಯ ತೆರಿಗೆ ಇಲಾಖೆ ಅಂಬಾನಿಗೆ ನೋಟಿಸು ಕಳುಹಿಸಿದ್ದು 2015ರ ಕಪ್ಪುಹಣ ನಿಷೇಧ ಕುರಿತು ವಿವರವನ್ನು ಕೇಳಿದೆ. ಮುಕೇಶ್ ಅಂಬಾನಿ ಕುಟುಂಬಕ್ಕೆ ಎಚ್ಎಸ್ಬಿಸಿ ಬ್ಯಾಂಕಿನಲ್ಲಿ ಕಪ್ಪುಹಣ ಠೇವಣಿ ಇದೆ ಎಂದು ಶಂಕೆಯಿದೆ. ಇದೇ ವೇಳೆ, ನೋಟಿಸು ಸಿಕ್ಕಿದೆ ಎಂಬ ವರದಿಯನ್ನು ನಿರಾಕರಿಸಿ ರಿಲಯನ್ಸ್ ರಂಗಪ್ರವೇಶಿಸಿತು. ಆದರೆ, ವರದಿಯ ಬಗ್ಗೆ ಹೆಚ್ಚಿನ ಹೇಳಿಕೆ ನೀಡಲು ರಿಲಯನ್ಸ್ ಮುಂದಾಗಿಲ್ಲ.












