ರಾಷ್ಟ್ರಪತಿ ಭವನದ ಬಳಿ ಡ್ರೋನ್ ಹಾರಾಟ: ಅಮೆರಿಕನ್ ಪ್ರಜೆಗಳ ಬಂಧನ

0
599

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.17:ರಾಷ್ಟ್ರಪತಿ ಭವನದ ಸಮೀಪ ಡ್ರೋನ್ ಹಾರಿಸಿದ ಅಮೆರಿಕನ್ ಪ್ರಜೆಗಳಾದ ತಂದೆ, ಮಗನನ್ನು ಬಂಧಿಸಲಾಗಿದೆ. ಸೆಪ್ಟಂಬರ್ ಹದಿನಾಲ್ಕರಂದು ಇಬ್ಬರನ್ನು ಕಸ್ಟಡಿಗೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ಭದ್ರತಾ ವಲಯವಾದ ರಾಷ್ಟ್ರಪತಿ ಭವನದ ದೃಶ್ಯಗಳನ್ನು ಡ್ರೋನ್ ಕ್ಯಾಮರಾ ಉಪಯೋಗಿಸಿ ಇವರು ಚಿತ್ರಿಸಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಈ ವಲಯದಲ್ಲಿ ಡ್ರೋನ್ ಹಾರಾಟ ನಿಷಿದ್ಧವಾಗಿದೆ.