ಸನ್ಮಾರ್ಗ ವಾರ್ತೆ
ಇಸ್ರೇಲ್ ಸಂಸತ್ತಿನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ ನಡೆದಿದ್ದು ಅರಬ್ ಸಂಸದ ಮತ್ತು ಜಾಯಿಂಟ್ ಲಿಸ್ಟ್ ಮೈತ್ರಿಕೂಟದ ಅಧ್ಯಕ್ಷ ಅಹಮದ್ ತಿಬಿ ಅವರು ಉಪ ಸ್ಪೀಕರ್ ಆಗಿ ಆಯ್ಕೆಯಾಗಿದ್ದಾರೆ. ಅಕ್ಟೋಬರ್ 27ರ ಚುನಾವಣೆಯಲ್ಲಿ 11 ಸ್ಥಾನಗಳನ್ನು ಗೆದ್ದ ಜಾಯಿಂಟ್ ಲಿಸ್ಟ್ ಮೈತ್ರಿಕೂಟದ ಪಾಲಿಗೆ ಇದು ಬಹಳ ದೊಡ್ಡ ಸಾಧನೆಯಾಗಿದೆ ಎಂದು ಅಹಮದ್ ತಿಬಿ ಹೇಳಿದ್ದಾರೆ.
ಇಸ್ರೇಲ್ ನಲ್ಲಿ ಫೆಲೆಸ್ತೀನಿ ನಾಗರಿಕರನ್ನು ಪ್ರತಿನಿಧಿಸುವ ಜಾಯಿಂಟ್ ಲಿಸ್ಟ್ ಮತ್ತು ಯುನೈಟೆಡ್ ಅರಬ್ ಲಿಸ್ಟ್ ಚುನಾವಣೆಯಲ್ಲಿ ಒಟ್ಟು 19 ಸ್ಥಾನಗಳನ್ನು ಗೆದ್ದಿದ್ದು ಫೆಲೆಸ್ತೀನ್ ಸಮುದಾಯ ಎದುರಿಸುತ್ತಿರುವ ತಾರತಮ್ಯ ಮತ್ತು ಇತರ ಸಮಸ್ಯೆಗಳನ್ನು ಬಗೆಹರಿಸಲು ಈ ಪ್ರಾತಿನಿಧ್ಯವನ್ನು ಬಳಸಲು ಸಂಘಟಿತ ಪ್ರಯತ್ನವನ್ನು ಮಾಡಲಿದೆ ಎಂದು ಭರವಸೆ ನೀಡಲಾಗಿದೆ.
1999 ರಿಂದ ಇಸ್ರೇಲ್ ಸಂಸತ್ತಿನ ಸದಸ್ಯರಾಗಿರುವ ಅಹಮದ್ ತಿಬಿ ಅವರು ಇಸ್ರೇಲಿ ರಾಜಕೀಯದಲ್ಲಿ ಪ್ರಮುಖ ಫೆಲಸ್ತೀನಿ ವ್ಯಕ್ತಿಗಳಲ್ಲಿ ಒಬ್ಬರು.












