ಸನ್ಮಾರ್ಗ ವಾರ್ತೆ
ಫುಜೈರದಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ಮೃತಪಟ್ಟ 13 ವರ್ಷದ ಭಾರತೀಯ ಬಾಲಕ ಮೊಹಮ್ಮದ್ ಇಮ್ರಾನ್ ಮನ್ಸೂರ್ ನ ಅಂತ್ಯಕ್ರಿಯೆಯಲ್ಲಿ ವಿವಿಧ ದೇಶಗಳ ನೂರಾರು ಜನರು ಭಾಗವಹಿಸಿದರು. ನವಂಬರ್ 14ರಂದು ಸಂಜೆ ಅಲ್ ಮಹಾತಾದಲ್ಲಿರುವ ಅಲ್ ಝಹರಾ ಮಸೀದಿಯಲ್ಲಿ ಅಂತಿಮ ಪ್ರಾರ್ಥನೆ ನಡೆದು ಫುಜೈರಾದ ಅಲ್ ಶರಿಯ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಸುಮಾರು 500 ರಷ್ಟು ಜನರು ಅಂತ್ಯಕ್ರಿಯೆಯಲ್ಲಿ ಭಾಗಿಯಾದರು.
ಗುಜರಾತ್ ಮೂಲದ ಈ ಕುಟುಂಬ ನವೆಂಬರ್ ಆರರಂದು ವಿಸಿಟಿಂಗ್ ವೀಸಾದಲ್ಲಿ ಯು ಎ ಇಗೆ ಆಗಮಿಸಿತ್ತು. ಅವರು ಮನೆಗೆ ಮರಳಲು ಫುಜೈರಾ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಬಾಲಕನ ಪೋಷಕರು ಮತ್ತು ಅಕ್ಕ ಗಂಭೀರ ಗಾಯಗೊಂಡಿದ್ದಾರೆ. ಮಗನ ಸಾವಿನ ಬಗ್ಗೆ ಪೋಷಕರಿಗೆ ಇನ್ನೂ ಮಾಹಿತಿ ನೀಡಲಾಗಿಲ್ಲ. ಅವರ ವಾಹನ ಚಲಾಯಿಸುತ್ತಿದ್ದ ಪಾಕಿಸ್ತಾನಿ ಚಾಲಕ ಕೂಡ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.
ಶೇಕ್ ಖಲೀಫಾ ಬಿನ್ ಝಾಯಿದ್ ರಸ್ತೆಯಲ್ಲಿ 23 ವಾಹನಗಳು ಡಿಕ್ಕಿ ಹೊಡೆದ ಈ ಅಪಘಾತದಲ್ಲಿ 10 ಮಂದಿ ಯುಎಇ ನಾಗರಿಕರು ಮತ್ತು ನಾಲ್ವರು ಭಾರತೀಯರು ಸೇರಿದಂತೆ 14 ಮಂದಿ ಸಾವನ್ನಪ್ಪಿದ್ದರು.












