ಮದ್ರಾಸ್ ಹೈಕೋರ್ಟಿಗೆ ಬಾಂಬ್ ಬೆದರಿಕೆ

0
510

ಸನ್ಮಾರ್ಗ ವಾರ್ತೆ

ಚೆನ್ನೈ,ಸೆ.17: ಮದ್ರಾಸ್ ಹೈಕೋರ್ಟಿಗೆ ಬಾಂಬ್ ಬೆದರಿಕೆ ಹಾಕಲಾಗಿದೆ. ಸೆಪ್ಟಂಬರ್ ಒಂಬತ್ತರಂದು ಹದರ್ಶನ್ ಸಿಂಗ್ ನಾಗ್‍ಪಾಲ್ ಎಂಬಾತ ಹೈಕೋರ್ಟಿನ ರಿಜಿಸ್ಟ್ರಾರ್‌ಗೆ ಇಂಗ್ಲಿಷ್‍ನಲ್ಲಿ ಬರೆದ ಪತ್ರದಲ್ಲಿ ಬೆದರಿಕೆ ಹಾಕಿದ್ದು ಅಂತಾರಾಷ್ಟ್ರೀಯ ಖಾಲಿಸ್ಥಾನ ಗುಂಪಿನ ತಾನು ಮತ್ತು ಪುತ್ರ ಸೇರಿ ಸೆಪ್ಟಂಬರ್ 30ಕ್ಕೆ ಹೈಕೋರ್ಟು ಕಟ್ಟಡಕ್ಕೆ ಬಾಂಬು ಹಾಕಿ ಧ್ವಂಸ ಮಾಡುತ್ತೇವೆ ಎಂದು ಹೇಳಿದ್ದಾನೆ.

ವಿವಿಧ ರಾಜ್ಯಗಳಲ್ಲಿ ಪ್ರಯಾಣಿಸುತ್ತಿರುವ ನಾವು ಮೊಬೈಲ್ ಫೋನ್,  ಸಿಮ್ ಕಾರ್ಡ್ ಬದಲಾಯಿಸುತಿದ್ದೇವೆ. ಚೆನ್ನೈ ಸಿಟಿ ಪೊಲೀಸ್ ಕಮಿಶನರ್‍‌ಗೂ ಕೋರ್ಟು ಸುರಕ್ಷಾ ಹೊಣೆಯಿರುವ ಸಿಐ ಎಸ್‍ಎಫ್ ಕೇಂದ್ರ ಪಡೆಗೂ ಪತ್ರವನ್ನು ಹಸ್ತಾಂತರಿಸಲಾಗಿದೆ. ದಿಲ್ಲಿಯ ವಿಳಾಸದಿಂದ ಪತ್ರ ಬಂದಿದ್ದು, ದಿಲ್ಲಿ ಪೊಲೀಸರಿಗೂ ಈ ಕುರಿತ ಮಾಹಿತಿ ನೀಡಲಾಗಿದೆ.