✍️ ಅರಫಾ ಮಂಚಿ
ಹೌದು ಈಗ ದೇಶದಾದ್ಯಂತ ರಾಹುಲ್ ಗಾಂಧಿ ಎತ್ತಿದ ಇಶ್ಯೂ ಬಹುದೊಡ್ಡ ರೀತಿಯಲ್ಲಿ ಚರ್ಚೆ ಆಗುತ್ತಿದೆ. ಮೋದಿ ವಿದೇಶಿ ಕನೆಕ್ಷನ್ನಿಂದ ಪ್ರಧಾನಿಯಾಗಿರುವುದು ಎಂಬುದು ರಾಹುಲ್ ಅವರ ಒಂದು ಆರೋಪವಾದರೆ. ಐದು ನಿಮಿಷದಲ್ಲಿ ಮೋದಿ ಅವರನ್ನು ದೇಶದ್ರೋಹಿ ಎಂದು ಸಾಬೀತುಪಡಿಸುತ್ತೇನೆ ಎಂದು ಸವಾಲೆಸೆದು ತನ್ನೊಡನೆ ಬಹಿರಂಗ ಚರ್ಚೆಗೆ ಬರುವಂತೆ ಟ್ವೀಟ್ ಮಾಡಿದ್ದು ಮತ್ತು ಪದೇಪದೇ ವೀಡಿಯೊ ಜಾರಿ ಮಾಡಿ ಚರ್ಚೆಗೆ ಕರೆಯುತ್ತಿರುವುದು ಇನ್ನೊಂದು ವ್ಯಾಪಕ ಚರ್ಚೆಯ ಹಿನ್ನೆಲೆಯ ವಿಷಯವಾಗಿದೆ.
ಬಿಜೆಪಿಗೆ ಇದನ್ನು ಒಂದು ರಾಜಕೀಯ ಜುಮ್ಲಾ ಅಂತ ತಳ್ಳಿಹಾಕಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಒಟ್ಟು ಸನ್ನಿವೇಶದಲ್ಲಿ ಬಿಜೆಪಿ ರಾಹುಲ್ ಗಾಂಧಿ ವಿರುದ್ಧ ಉದ್ರಿಕ್ತವಾಗಿದೆ. ಹೇಗಾದರೂ ಮಾಡಿ ವಿಷಯಾಂತರಿಸುವುದಕ್ಕೆ ಹಲವು ಇಶ್ಯೂಗಳನ್ನು ಅದು ಜನರ ನಡುವೆ ಎಸೆಯಿತು. ಪ್ರಯೋಜನ ಆಗಿಲ್ಲ. ರಾಹುಲ್ ಗಾಂಧಿಯ ಡ್ಯಾಶಿಂಗ್ ಪರ್ಸನಾಲಿಟಿ ಮತ್ತು ಪರ್ಫಾರ್ಮನ್ಸ್ ಎದುರು ನಿಂತು ಮಾತಾಡುವ ಧೈರ್ಯ ಮೋದಿಗಿಲ್ಲ ಎಂದು ಜನರ ನಡುವೆ ಅಥವಾ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ವಾಸ್ತವದಲ್ಲಿ ಮೋದಿ ತನ್ನ ವಿರುದ್ಧ ಎದ್ದ ಆರೋಪದ ಸತ್ಯಾಸತ್ಯತೆಯನ್ನು ಜನರಿಗೆ ವಿವರಿಸಿ ಹೇಳಬಹುದಿತ್ತು. ಅದಕ್ಕಾಗಿ ಪ್ರೆಸ್ ಮೀಟ್ ಮಾಡಬೇಕಿತ್ತು. ಆದರೆ ಈ ವಿಚಾರದಲ್ಲಿ ಏನೂ ಆಗ್ಲಿಲ್ಲ. ರಾಹುಲ್ಗೆ ಉತ್ತರ ಎಂಬಂತೆ ದೀಪಾವಳಿ ದಿನ ಅರೆಸೈನಿಕ ಪಡೆಯ ನಡುವೆ ಹೋಗಿ ದಿಮಾಕಿ ನಕ್ಸಲ್ ಹೇಳಿಬಿಟ್ಟು ವಿಷಯಗಳನ್ನು ತಿರುಚುವುದಕ್ಕೆ ಅಥವಾ ವಿಷಯಾಂತರಿಸಲು ಯತ್ನ ನಡೆಸಿ ವಿಫಲರಾಗಿದ್ದಾರೆ.
ವಿಫಲ ಯಾಕೆಂದರೆ ಜನಮನದಲ್ಲಿ ಅಥವಾ ಚರ್ಚೆಯಲ್ಲಿ ರಾಹುಲ್ ಕುರಿತು ಮಮತೆ ಹೆಚ್ಚಿತು. ದಿಮಾಕಿ ನಕ್ಸಲ್ ಎಂಬ ಬಿಜೆಪಿಯ ಹಳೆ ಟಾನಿಕ್ಕು ಫಲ ನೀಡಿಲ್ಲ. ವಾಸ್ತವದಲ್ಲಿ ಪ್ರಧಾನ ಮಂತ್ರಿ ತಮ್ಮ ಮೇಲಿರುವ ಆರೋಪಕ್ಕೆ ಸ್ಪಷ್ಟೀಕರಣ ನೀಡಬೇಕಿತ್ತು. ಅಮೆರಿಕನ್ ಶೈಲಿಯಲ್ಲಿ ಬಹಿರಂಗ ಚರ್ಚೆಯಲ್ಲಿ ನೀರಿಗೆ ನೀರು ಹಾಲಿಗೆ ಹಾಲು ಬೇರ್ಪಡಿಸಿ ದೇಶಕ್ಕೆ ತೋರಿಸಿಕೊಡಬೇಕಿತ್ತು. ಹಾಗೆ ಆಗ್ಲೇ ಇಲ್ಲ. ಮೋದಿ ತಾನು 150 ಕೋಟಿ ಜನರ ಪ್ರಧಾನಿ. ಜನರಿಗೆ ಉತ್ತರಿಸಬೇಕಾದ್ದು ಅವರ ಜವಾಬ್ದಾರಿ ಎಂಬುದನ್ನೇ ಮರೆತುಬಿಟ್ಟು ವರ್ತಿಸುತ್ತಿದ್ದಾರೆ. ರಾಹುಲ್ ಸುಳ್ಳಾರೋಪ ಹೊರಿಸಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕಿತ್ತು. ಹಾಗೇ ಆಗ್ಲಿಲ್ಲ.
ಪ್ರಧಾನಿ ಸ್ಥಾನದ ಅರ್ಹತೆ ಆರೆಸ್ಸೆಸ್ ವ್ಯಕ್ತಿಯಾಗುವುದು?
ಒಮ್ಮೆ ಆರೆಸ್ಸೆಸ್ ಪ್ರಮುಖ್ ಮೋಹನ್ ಭಾಗವತ್ ಮೋದಿಯ ಕುರಿತಂತೆ ದೇಶದ ಪ್ರಧಾನಿ ಒರ್ವ ಸ್ವಯಂಸೇವಕ್ ಆಗಿದ್ದಾರೆ ಎಂದು ಹೇಳಿದ್ದರು. ಆದರೆ, ಆರೆಸ್ಸೆಸ್ ಸ್ವಯಂಸೇವಕ ಆಗಿರುವುದು ಪ್ರಧಾನಿ ಸ್ಥಾನದ ಜವಾಬ್ದಾರಿ ನಿಭಾಯಿಸುವುದು ಈ ಎರಡೂ ಒಂದೇ ಅಲ್ಲ. ಖಂಡಿತ ಈ ಸ್ವಯಂಸೇವಕ್ ಪ್ರಜಾಪ್ರಭುತ್ವದಲ್ಲಿ ಯಾವತ್ತೂ ಪ್ರಧಾನಿ ಸ್ಥಾನದ ಅಳತೆಗೋಳಲ್ಲ. ಅದು ಸಂವಿಧಾನಾತ್ಮಕ ಅರ್ಹತೆಯೂ ಅಲ್ಲ. ಒಬ್ಬ ಮುತ್ಸದ್ದಿ ಆ ಸ್ಥಾನದಲ್ಲಿರುವುದು ದೇಶದ ಜನರ ಹಿತದೃಷ್ಟಿಯಲ್ಲಿ ಪ್ರಮುಖವಾಗುತ್ತದೆ. ಎಷ್ಟೇ ಗಂಭೀರ ವಿಷಯವಿದ್ದರೂ ಮೋದಿಯವರ ಕೆಲವು ಪ್ರವೃತ್ತಿಗಳು ಉಢಾಪೆಯಿಂದ ವರ್ತಿಸುವುದು ಅಥವಾ ನಿರ್ಲಕ್ಷ್ಯ ವಹಿಸುವುದು ತೋರಿಸಿದೆ. ಉದಾಹರಣೆಗೆ ನೋಡಿ, ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನು ಮೋದಿಯವರು ಮಿತ್ರ ಎನ್ನುತ್ತಾರೆ. ಆದರೆ ನಮ್ಮ ಬದ್ಧ ಶತ್ರು ಎನ್ನಲಾಗುವ ಪಾಕಿಸ್ತಾನದೊಂದಿಗೆ ಡೊನಾಲ್ಡ್ ಅಮೆರಿಕ ಆಪ್ತಮಿತ್ರತ್ವ ಹೊಂದಿದೆ. ಈ ಮಿತ್ರತ್ವಕ್ಕೆ ಭಾರತದ ವಿದೇಶ ನೀತಿಯಲ್ಲಿ ಸ್ಥಾನ ಎಲ್ಲಿದೆ. ಅವರ ಇಂತಹ ದ್ವಂದ್ವ ರೀತಿ ದೇಶದ ಮುಂದೆ ಪ್ರದರ್ಶಿತಗೊಳ್ಳುತ್ತಿದೆ. ವಿದೇಶ ಪ್ರವಾಸಗಳನ್ನು ಹೆಚ್ಚೆಚ್ಚು ಮಾಡುವುದು ಮತ್ತು ಇಸ್ರೇಲ್ಗೆ ಹೋಗಿ ಅಲ್ಲಿ ಫಾದರ್ ಲ್ಯಾಂಡ್ ಅಂತ ನೆತನ್ಯಾಹುವನ್ನು ಮೆಚ್ಚಿಸುವ ಮಾತಾಡುವುದು. ಇಂತಹ ಅನಗತ್ಯ ಪ್ರವೃತ್ತಿಗಳು ದೇಶದ ಉನ್ನತ ರಾಜಕೀಯ ನಾಯಕನಿಂದ ಜನ ನಿರೀಕ್ಷಿಸುವುದಿಲ್ಲ. ಈ ಇಸ್ರೇಲ್ 150 ಕೋಟಿಯ ಫಾದರ್ ಅಂತ ಬಿಂಬಿಸುವ ಅಧಿಕಾರವನ್ನು ಸಂವಿಧಾನ ಯಾರಿಗೂ ನೀಡಿಲ್ಲ. ಇಂತಹ ಪ್ರವೃತ್ತಿ ಅವರ ಚಾರ್ಮ್ ಎತ್ತರಿಸಿಲ್ಲ. ಜೊತೆಗೆ ಪ್ರಧಾನಿಯಂತಹ ದೇಶದ ಸರ್ವೋನ್ನತ ಕುರ್ಚಿಯಲ್ಲಿ ಆಸೀನರಾದ ವ್ಯಕ್ತಿಗೆ ಒಪ್ಪುವುದೂ ಇಲ್ಲ. ಮೋದಿಯ ಇಂತಹ ಪ್ರವೃತ್ತಿಗಳು ಅಥವಾ ಇಸ್ರೇಲ್ ಫಾದರ್ ಲ್ಯಾಂಡ್ ಎಂಬ ತಪ್ಪೊಪ್ಪಿಗೆಯೇ ಬಿಜೆಪಿಯ ವಿಶ್ವಗುರು ಪ್ರತಿಪಾದನೆಗೆ ವೀಟೋ ಅಥವಾ ಉಲ್ಟಾ ಆಗಿದೆ.
ಮೋದಿಯ ದಿಮಾಕಿ ನಕ್ಸಲ್:
ಮೊದಲೇ ಹೇಳಿದಂತೆ ನಕ್ಸಲಿ ಕತ್ಮ್ ಹುವೆ ಹೈಂ ಲೇಕಿನ್ ದಿಮಾಕಿ ನಕ್ಸಲೋಂಕ ಕತ್ರಾ ಹೈ… ಎಂದು ದೀಪಾವಳಿಗೆ ಬಸ್ತರ್ಗೆ ಹೋಗಿ ಮೋದಿ ಸಿಆರ್ಪಿಯ ಮುಂದೆ ಭಾಷಣ ನೀಡುತ್ತಾರೆ. ಯಾರೀ ನಕ್ಸಲ್? ದೀಪಾವಳಿಯ ದಿನ ಶುಭಾಶಯ ವಿನಿಮಯದ ಮಾತುಗಳಿರುತ್ತದೆ ಎಂದು ದೇಶ ನಿರೀಕ್ಷಿಸಿದ್ದು. ಆದರೆ ಅಲ್ಲಿಯೂ ದಿಮಾಕಿ ನಕ್ಸಲ್! ಬಹುಶಃ ರಾಹುಲ್ ಗಾಂಧಿ ಎತ್ತಿದ ಸವಾಲು. ಕಾಕ್ರೋಚ್ ಪಾರ್ಟಿ ಸಹಿತ ವಿಪಕ್ಷಗಳು ಮುಖ್ಯುನಾವಣಾ ಆಯುಕ್ತ ಜ್ಞಾನೇಶ್ಕುಮಾರ್ರ ರಾಜೀನಾಮೆ ಆಗ್ರಹಿಸುವುದು ನಕ್ಸಲ್ ಆಕ್ಟಿವಿಟಿ ಎಂದು ಹೇಳ್ತಿದ್ದಾರಾ? ಆಂಟಿ ನ್ಯಾಶನಲ್ ಅಂತ ಕರೆದದ್ದು ಮಾತ್ರ ಅಲ್ಲ ಸಾಬೀತುಪಡಿಸುತ್ತೇನೆ ಎಂದ ಮೇಲೆ ರಾಹುಲ್ ದಿಮಾಗ್ ಬಗ್ಗೆ ಜನರಲ್ಲಿ ಗೊಂದಲ ಉಳಿಯುವುದಿಲ್ಲ. ಇವೆಲ್ಲ ಮೋದಿಯವರನ್ನು ಉದ್ರಿಕ್ತಗೊಳಿಸಿದೆ ನಿಜ. ವಿಪಕ್ಷಗಳ ಹೋರಾಟಗಳನ್ನು ಸ್ವಯಂಸೇವಕ ಸಂಘಟನೆಗಳ ಬೇಡಿಕೆಗಳನ್ನು ಬಹುದೊಡ್ಡ ದೇಶ ವಿರೋಧಿ ಚಟುವಟಿಕೆಗಳು ಎಂದು ಬಿಂಬಿಸುವ ಯತ್ನ ಯಾವತ್ತೂ ವಿಫಲಗೊಳ್ಳುತ್ತದೆ. ಸರಕಾರವನ್ನು ಪ್ರಶ್ನಿಸುವುದು, ಸಾಂವಿಧಾನಿಕ ಸಂಸ್ಥೆಗಳು ದಾರಿತಪ್ಪಿದರೆ ತಿದ್ದುವುದು ಜನತಾ ಹಕ್ಕು ಆಗಿದೆ.
ಇತ್ತೀಚೆಗಿನ ಎಸೈಆರ್ನಲ್ಲಿ ಕೋಟ್ಯಂತರ ವೋಟರ್ಸ್ಗಳನ್ನು ಕೈಬಿಡಲಾಗಿದೆ. ಚುನಾವಣಾ ಆಯೋಗದಿಂದಾಗಿ ಪಶ್ಚಿಮಬಂಗಾಳ, ಉತ್ತರಪ್ರದೇಶ, ಕರ್ನಾಟಕ, ಗೋವಾ ರಾಜಸ್ಥಾನ ಮುಂತಾದ ಎಸ್ಸೆರ್ಆರ್ ನಡೆದಿರುವಲ್ಲಿ ಕೋಟ್ಯಂತರ ಮತದಾರರು ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಮಹಾರಾಷ್ಟ್ರದ ವಿಧಾನಸಭಾ ಚುನಾವಣೆಯಲ್ಲಿ ನಲ್ವತ್ತು ಲಕ್ಷ ವೋರ್ಟ್ಸ್ಗಳು ಅಸಹಜ ರೀತಿಯಲ್ಲಿ ಹೆಚ್ಚಿಸಲಾಗಿದೆ. ಈ ಕುರಿತು ವರದಿಗಳು ಇರುವಾಗ ಚುನಾವಣಾ ಆಯುಕ್ತರ ವಿರುದ್ಧ, ಜನರು, ನಾಗರಿಕ ಸಂಘಟನೆಗಳು, ರಾಜಕೀಯ ಪಕ್ಷಗಳು ಹೋರಾಟಕ್ಕಿಳಿದರೆ ಅದು ಜನಪರವಾಗಿರುತ್ತದೆ. ದಿಮಾಕಿ ನಕ್ಸಲ್ ಅಲ್ಲ. ಉತ್ತರಪ್ರದೇಶದ ಬಿಜೆಪಿಯದೇ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರು ಎಸ್ಐಆರ್ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸುಮಾರು 1 ಕೋಟಿ 27 ಲಕ್ಷ ಹಿಂದೂ ಮತದಾರರನ್ನು ವೋಟರ್ ಲಿಸ್ಟಿನಿಂದ ತೆಗೆದುಹಾಕಲಾಗಿದೆ ಎಂದು ಹೇಳಿದ್ದಾರೆ. ಹಾಗಾದರೆ ಈ ಯೋಗಿ ಆದಿತ್ಯನಾಥ್ ಕೂಡ ಮೋದಿಜೀ ಪ್ರಕಾರ ದಿಮಾಕಿ ನಕ್ಸಲ್ ಆಗುತ್ತಾರೆ.
ಬೋಜ್ಪುರದಲ್ಲಿ ಸಿಕ್ಕಿಬಿದ್ದ ನಕ್ಸಲ್:
ಬಿಹಾರದ ಎಸ್ಟಿಎಫ್ ಮತ್ತು ಪೊಲೀಸರು ಜಂಟಿಯಾಗಿ ಭೋಜ್ಪುರದಲ್ಲಿ 19,250 ಜೀವಂತ ಮದ್ದುಗುಂಡುಗಳು ವಶಪಡಿಸಿದ್ದಾರೆ. ಉತ್ತರಪ್ರದೇಶದ ಬದಾಯುನಿಂದ ತರಲಾಗುತ್ತಿತ್ತು ಮತ್ತು ಇದಕ್ಕೆ ಆರೆಸ್ಸೆಸ್ ಕನೆಕ್ಷನ್ ಇದೆ ಎಂದು ವರದಿಯಾಗಿದೆ. ಇದನ್ನು ಆರ್ಜೆಡಿಯ ತೇಜಸ್ವಿ ಯಾದವ್ 44,000 ಜೀವಂತ ಗುಂಡುಗಳು ಎಂದು ಹೇಳಿದ್ದಾರೆ. ಸಿಕ್ಕಿಬಿದ್ದ ಕಳ್ಳಸಾಗಾಟದಾರರಲ್ಲಿ ಮೂರು ಮಂದಿ ಆರೆಸ್ಸೆಸ್ ಕಾರ್ಯಕರ್ತರು ಎಂದು ಆರೆಸ್ಸೆಸ್ ಪೋಷಾಕಿನಲ್ಲಿರುವ ಫೋಟೋ ಸಹಿತ ಬಹಿರಂಗವಾಗಿದೆ. ತೇಜಸ್ವಿ ಯಾದವ್ ಆರೆಸ್ಸೆಸ್ ಅನ್ನು ಭಯೋತ್ಪಾದಕ ಸಂಘಟನೆಯೆಂದು ಘೋಷಿಸಬೇಕೆಂದು ಹೇಳುತ್ತಿದ್ದಾರೆ. ಬಹುಶಃ ಪ್ರತಿಪಕ್ಷ ಆರೆಸ್ಸೆಸ್ ಅನ್ನು ಮತ್ತು ಈ ಕೃತ್ಯವನ್ನು ಭಯೋತ್ಪಾದಕ ಕೃತ್ಯ ಎನ್ನದಿದ್ದರೂ ಕನಿಷ್ಠ ದಿಮಾಕಿ ನಕ್ಸಲ್ ಎಂದಾದರೂ ಹೇಳಬಹುದು. ಪೊಲೀಸರ ತನಿಖೆ ಮುಂದುವರಿಯುತ್ತದೆ. ಖಂಡಿತ ಆರೆಸ್ಸೆಸ್ಗೆ ಕ್ಲೀನ್ ಚಿಟ್ ಸಿಗಬಹುದು. ಉತ್ತರಪ್ರದೇಶ ಮತ್ತು ಬಿಹಾರಗಳಲ್ಲಿ ಬಿಜೆಪಿ ಸರಕಾರ ಇದೆ. ಬಿಜೆಪಿಗೆ ಆರೆಸ್ಸೆಸ್ ಜೊತೆ ಕನೆಕ್ಷನ್ ಇದೆ. ಮೋದಿ ಅವರಿಗೆ ಆರೆಸ್ಸೆಸ್ನೊಂದಿಗೆ ಕನೆಕ್ಷನ್ ಇದೆ. ಸಿಕ್ಕಿಬಿದ್ದ ಆರೋಪಿಗಳಲ್ಲಿ ಮೂವರಿಗೆ ಆರೆಸ್ಸೆಸ್ನೊಂದಿಗೆ ಕನೆಕ್ಷನ್ ಇದೆ. ಇದು ಕೂಡ ದೇಶದ್ರೋಹ ಆಕ್ಟಿವಿಟಿ ಎಂದು ನಿರ್ಧಾರವಾಗಬೇಕಾದ ಇಶ್ಯೂ ಆಗಿದೆ. ಆದ್ದರಿಂದ ರಾಹುಲ್ ಗಾಂಧಿ ಐದೇ ನಿಮಿಷದಲ್ಲಿ ಮೋದಿಯನ್ನು ದೇಶದ್ರೋಹಿ ಎಂದು ಸಾಬೀತುಪಡಿಸುತ್ತೇನೆ ಎಂದು ಹೇಳುತ್ತಲೂ ಇದ್ದಾರೆ.
ಬಿಜೆಪಿ ಆಡಳಿತದಲ್ಲಿ ಜನರ ವಿಶ್ವಾಸ ಕಳೆದುಕೊಂಡ ಸಾಂವಿಧಾನಿಕ ಸಂಸ್ಥೆಗಳು:
ಮೊದಲು ಇ.ಡಿ, ಐಟಿ, ಸಿಬಿಐಗಳ ಹೆಸರು ಹೆಚ್ಚು ಕೇಳಿ ಬರುತ್ತಿದ್ದುದು ಈಗ ಚುನಾವಣಾ ಆಯೋಗ ಮತ್ತು ಸುಪ್ರೀಂಕೋರ್ಟಿ ಬಗ್ಗೆ ಚರ್ಚೆ ನಡೆಯುತ್ತಿದೆ. ಅಂದರೆ ಸರಕಾರಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಜನ ನಂಬುವುದಿಲ್ಲ. ಭಾರತದಲ್ಲಿ ಯಾವ ಪ್ರವೃತ್ತಿಗೂ ಚುನಾವಣಾ ಆಯುಕ್ತರಿಗೆ ಚಾರ್ಜ್ ಶೀಟ್ ಟ್ರಯಲ್ ಮಾಡಲಾಗುವುದಿಲ್ಲ ಎಂಬ ಕಾನೂನು ತಂದದ್ದು ಮೋದಿ ಸರಕಾರ. ದೇಶದ ಜನರಿಗೆ ಈ ತರಹ ಯಾವ ಹೆದರಿಕೆಯಿಲ್ಲದೆಯೂ ಆಯೋಗ ಕಾಡುವುದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟದ್ದು ಮೋದಿ ಸರ್ಕಾರ. ಹೀಗಾಗಿ ಜನರಲ್ಲಿ ಚುನಾವಣಾ ಆಯೋಗದ ಮೇಲೆ ಹೆಚ್ಚು ಸಂಶಯ ಹುಟ್ಟಲು ಕಾರಣವಾಯಿತು. ಆದರೆ ಸುಪ್ರೀಂಕೋರ್ಟಿಗೂ ಅಧಿಕಾರ ಇಲ್ಲ ಎಂದ ಮೇಲೆ ಹೀಗೆ ಯಾಕೆ ಎಂದು ಸುಪ್ರೀಂ ಕೋರ್ಟು ಈಗ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗದ ಮೇಲೆ ನೋಟಿಸು ಕೊಟ್ಟಿದೆ. ಆದರೆ, ಜನರು ಇದೊಂದು ಸುಪ್ರೀಂ ಕೋರ್ಟಿನ ಔಪಚಾರಿಕತೆ ಎಂದು ಹೇಳುತ್ತಿದ್ದಾರೆ.
ಈಗ ಸುಪ್ರೀಂ ಕೋರ್ಟಿನ ಮೇಲೆಯೇ ಬೆರಳು:
ಹೀಗೆ ಬೆರಳೆತ್ತಿದ್ದು ಮಮತಾ ಬ್ಯಾನರ್ಜಿ ಪಾರ್ಟಿಯ ಸಂಸದ ಅಭಿಷೇಕ್ ಬ್ಯಾನರ್ಜಿ. ಸುಪ್ರೀಂ ಕೋರ್ಟೇ ಪಶ್ಚಿಮಬಂಗಾಳದಲ್ಲಿ ತಮ್ಮ ಪಾರ್ಟಿಯನ್ನು ಸೋಲಿಸಿದ್ದು ಎಂದು ಮಾಧ್ಯಮದವರಿಗೆ ಹೇಳಿದ್ದಾರೆ. ಬಹುಶಃ ಆಯೋಗದ ವಿರುದ್ಧ ಅಥವಾ ಮತಕಳ್ಳತನದ ಕುರಿತಂತೆ ಕೋರ್ಟುಗಳು ವಿಚಾರಣಾ ಪ್ರಕ್ರಿಯೆಗಳನ್ನು ಬೇಕುಬೇಕೆಂದೇ ವಿಳಂಬ ಮಾಡಿದ್ದು ಬಿಜೆಪಿಗೆ ಉಪಕಾರವಾಯಿತು ಅಂತ ಅವರು ಸುಪ್ರೀಂ ಕೋರ್ಟನ್ನು ತರಾಟೆಗೆ ತೆಗೆದುಕೊಂಡದ್ದು. ಅವರು ಮಾಧ್ಯಮದವರ ಮುಂದೆ ಹೇಳಿದ ಪ್ರಕಾರ ಅವರಿಗೆ ಸುಪ್ರೀಂ ಕೋರ್ಟಿನಲ್ಲಿ ಒಂದು ಅರ್ಜಿ ದಾಖಲಿಸಲು ಒಬ್ಬ ಸಂಸದನಾಗಿಯೂ ಎರಡು ಮೂರು ತಿಂಗಳು ಅಲೆಯಬೇಕು. ಇದೇ ಸುಪ್ರೀಂ ಕೋರ್ಟಿನಲ್ಲಿ ಅದಾನಿ ಒಂದೇ ದಿನದಲ್ಲಿ ಎಲ್ಲವನ್ನೂ ಮಾಡಿ ಮುಗಿಸುತ್ತಾರೆ. ಕೋರ್ಟು ಪಕ್ಷಪಾತಿ ಎಂಬುದಕ್ಕೆ ಅವರು ಬಹಿರಂಗವಾಗಿ ಕೊಟ್ಟ ಉದಾಹರಣೆ ಇದು. ಪಶ್ಚಿಮಬಂಗಾಳದ ಚುನಾವಣೆಯಲ್ಲಿ ನಮಗೆ ಪ್ರತಿಸ್ಪರ್ಧಿಯಾಗಿದ್ದು ಸುಪ್ರೀಂ ಕೋರ್ಟು ಬಿಜೆಪಿಯೇ ಅಲ್ಲ ಎಂದೂ ಅಭಿಷೇಕ್ ಬ್ಯಾನರ್ಜಿ ಹೇಳಿದ್ದಾರೆ. ಒಂದು ಸತ್ಯ ಸಾಕ್ಷ್ಯಸಮೇತ ಹೇಳಿದಾಗ ಇವರನ್ನೂ ದಿಮಾಕಿ ನಕ್ಸಲ್ ಗೊಳಿಸಲು ಮೋದಿಯಂತಹವರು ಎಂತಹ ವೇದಿಕೆಯನ್ನೂ ಬಳಸುತ್ತಾರೆ. ಹೀಗಿರುವಾಗ ಪ್ರತಿಪಕ್ಷಗಳು ಆರೋಪಿಸುವಂತೆ ಟ್ರಯಲ್ ಹಿಯರಿಂಗೇ ಇಲ್ಲದ ಚುನಾವಣಾ ಆಯೋಗ ಆಳುವ ಪಕ್ಷದ ಹಿಡಿತದಲ್ಲಿರುವುದರಲ್ಲಿ ಅಚ್ಚರಿ ಇಲ್ಲ. ಹೀಗಾಗಿ ಸರಕಾರದ ಮೇಲೆ, ಚುನಾವಣಾ ಆಯೋಗದ ಮೇಲೆ, ಸುಪ್ರೀಂಕೋರ್ಟ ಮೇಲೂ ಭಕ್ತರನ್ನು ಹೊರತುಪಡಿಸಿದಂತೆ ಉಳಿದೆಲ್ಲ ಜನ ವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಸರಕಾರ ಮತ್ತು ಸಂಘಪರಿವಾರ ಇವರನ್ನು ದಿಮಾಕಿ ನಕ್ಸಲ್ ಎಂದು ಕರೆಯಬಹುದು.
ರಾಹುಲ್ ಕೊಟ್ಟ ಕ್ಲೂ:
ರಾಹುಲ್ ಗಾಂಧಿ ಐದು ನಿಮಿಷದಲ್ಲಿ ಮೋದಿಯನ್ನು ದೇಶದ್ರೋಹಿ ಎಂದು ಸಾಬೀತುಪಡಿಸುವೆ ಎಂದು ಟ್ವೀಟ್ ಮಾಡಿದ್ದು ಮಾತ್ರ ಅಲ್ಲ ಅದರ ಜೊತೆಗೆ ಕೆಲವು ಕ್ಲೂಗಳನ್ನು ಕೂಡ ಕೊಟ್ಟಿದ್ದಾರೆ. ಟ್ರಂಪ್ ಹೇಳಿದ್ದನ್ನು ಮೀರುವ ಶಕ್ತಿ ಧೈರ್ಯ ಮೋದಿಗಿಲ್ಲ. ಮೋದಿ ತಾನೊಬ್ಬನೇ ಹೋಗಿ ಅಮೆರಿಕದೊಂದಿಗೆ ಗಪ್ಚುಪ್ಪಾಗಿ ವ್ಯಾಪಾರ ಒಪ್ಪಂದ ಮಾಡಿದ್ದು. ಅಮೆರಿಕದಲ್ಲಿ ಅದಾನಿ ವಿರುದ್ಧ ಬಿದ್ದಿದ್ದ ಚಾರ್ಜ್ಶೀಟು ಅಮೆರಿಕಕ್ಕೆ ಭೇಟಿ ನೀಡಿದ ನಂತರ ರದ್ದಾದ್ದು. ಆಪರೇಷನ್ ಸಿಂಧೂರ್ ನಂತರ ಯುದ್ಧ ಹೊಸ್ತಿಲಿನಲ್ಲಿದ್ದ ಯುದ್ಧವನ್ನು ಟ್ರಂಪ್ ತಾನೇ ಹೇಳಿ ನಿಲ್ಲಿಸಿದ್ದು ಎಂದು ಆ ಸಂದರ್ಭದಲ್ಲಿ ಅಲ್ಲಲ್ಲಿ ಹೇಳಿಕೆ ನೀಡುತ್ತಿದ್ದುದು. ಜೊತೆಗೆ ಎಫ್ಸ್ಟೀನ್ ಫೈಲ್ ಅನ್ನೂ ರಾಹುಲ್ ಉಲ್ಲೇಖಿಸಿದ್ದಾರೆ. ಮೋದಿ ವಿರುದ್ಧ ಎಫ್ಸ್ಟೀನ್ ಫೈಲ್ ಬಗ್ಗೆ ಪ್ರತಿಪಕ್ಷಗಳು ಆರೋಪ ಎತ್ತಿದಾಗ ಮೋದಿ ಒಂದೂ ಸ್ಪಷ್ಟನೆ ನೀಡಿಲ್ಲ. ಮೌನವಾಗಿದ್ದರು. ಟ್ರಂಪ್ ಬಹಿರಂಗವಾಗಿ ಭಾರತಕ್ಕೆ ತಾನೇ ದೊಡ್ಡಣ್ಣ ಎಂದು ತೋರಿಸಿಕೊಳ್ಳುತ್ತಿದ್ದಾಗಲೂ ಮೋದಿ ಮೌನ ಮುರಿಯಲಿಲ್ಲ. ಆಗಾಗ ಅಮೆರಿಕಕ್ಕೆ ಓಡಿಹೋಗುವುದು ಮಾಡುವುದು ಬಿಟ್ಟು ಇನ್ನೇನು ಆಗ್ಲಿಲ್ಲ. ಟ್ರಂಪ್ರ ಮಿತ್ರತ್ವಕ್ಕೆ ಜೋತುಬೀಳುವುದು. ಅಮೆರಿಕದ ಚುನಾವಣೆಯ ಸಮಯದಲ್ಲಿ ಟ್ರಂಪ್ ಪರ ವೋಟು ಕೇಳಿದ್ದು. ಚುನಾವಣಾ ಪ್ರಚಾರ ಮಾಡಿದ್ದು. ರಾಹುಲ್ ಆಹ್ವಾನ ಇತ್ತ ಬಹಿರಂಗ ಚರ್ಚೆಯಲ್ಲಿ ಈ ಎಲ್ಲ ವಿವರಗಳು ಬಹಿರಂಗಗೊಳ್ಳಬಹುದು. ಹೀಗಾಗಿ ಐದಾರು ನಿಮಿಷದಲ್ಲಿ ಮೋದಿಯನ್ನು ದೇಶದ್ರೋಹಿ ಎಂದು ಸಾಬೀತುಪಡಿಸುತ್ತೇನೆ ಎಂದು ರಾಹುಲ್ ಗಾಂಧಿ ಎಂದದ್ದು ಇರಬಹುದು.
ಇನ್ನೂ ಅನೇಕ ಮುಖ್ಯ ಮುಖ್ಯ ಪುರಾವೆ ಮತ್ತು ಸಾಕ್ಷ್ಯಗಳಿರಬಹುದು. ಅಧಿಕಾರದಿಂದ ಕೆಳಗಿಳಿದಾಗ ಮೋದಿಯನ್ನು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸಿದರೂ ಆಶ್ಚರ್ಯ ಇಲ್ಲ. ಮೊದಲೇ ಎಎಪಿಯ ಸಂಜಯ್ ಸಿಂಗ್ ಬಹಿರಂಗವಾಗಿ ಜೈಲಿಗೆ ಕಳುಹಿಸುತ್ತೇವೆ ಎಂದು ಹೇಳುತ್ತಾ ಬರುತ್ತಿದ್ದಾರೆ. ಬಿಹಾರದಲ್ಲಿ ಕಾರ್ಯಕ್ರಮವೊಂದರಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾಷಣ ಮಾಡುತ್ತಾ ಮೋದಿ ಕ್ಯಾ ಮೋದಿಕಾ ಬಾಪ್ ಬೀ ಜಾನ ಹೋಗಾ ಎಂದು ಸವಾಲು ಹಾಕಿದ್ದು ನಿಮಗೂ ಗೊತ್ತು.
ಆಪರೇಷನ್ ಸಿಂಧೂರ್:
ಬಹಳ ಗುಪ್ತವಾಗಿ ನಡೆದಿದ್ದ ಈ ಘಟನೆ. ನಂತರ ಇಂಡೋ ಪಾಕ್ ಯುದ್ಧದ ಹೊಸ್ತಿಲಿಗೆ ಬಂದು ನಿಂತದ್ದು ವರದಿಯಾಗಿತ್ತು. ಆದರೆ ಇಂತಹ ಸಂದರ್ಭದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನು ಮಧ್ಯಸ್ಥಿಕೆ ವಹಿಸಿ ಯುದ್ಧವನ್ನು ನಿಲ್ಲಿಸಿದ್ದು ಎಂದು ಹೇಳಿಕೆ ನೀಡಿದರು. ದೇಶ ಮೋದಿ ಪ್ರತಿಕ್ರಿಯೆಯನ್ನು ಕಾಯುತ್ತಿತ್ತು. ಅವರ ದಿವ್ಯ ಮೌನ ಈವತ್ತೂ ಇದೆ. ವಿದೇಶ ಸಚಿವಾಲಯ ವಕ್ತಾರ ಹೇಳಿಕೆ ನೀಡಿದ್ದು ಬಿಟ್ಟರೆ. ಇನ್ನೇನೂ ಆಗ್ಲಿಲ್ಲ. ಆಪರೇಷನ್ ಸಿಂಧೂರ್ನಲ್ಲಿ ದೇಶದ 10 ವೀರ ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಇರಲಿ ವಾಸ್ತವದಲ್ಲಿ ಟ್ರಂಪ್ ಆರೋಪಕ್ಕೆ ಪ್ರಧಾನಿ ಮೋದಿ ಉತ್ತರಿಸಿದ್ದರೆ ನಮ್ಮ ಸಾರ್ವಭೌಮತೆ ಪ್ರಶ್ನಿಸಲು ಯಾರು ಬರಬೇಡಿ ಎಂದಿದ್ದರೆ. ಅದು ಸರಿಯಾಗಿರುತ್ತಿತ್ತು. ಆದರೆ ದೇಶಕ್ಕಾದ ಅಪಮಾನವರಿಗೇ ಏನೂ ಅನ್ಸಿಲಿಲ್ಲ. ಹಾಗಿದ್ದರೆ ಮೋದಿಗೆ ಡೊನಾಲ್ಡ್ ಟ್ರಂಪ್ ದೇಶಕ್ಕಿಂತ ಮೇಲಾ ಎಂಬ ಚರ್ಚೆ ಹುಟ್ಟಿಕೊಳ್ಳುತ್ತದೆ. ಅಂದರೆ ಟ್ರಂಪ್ರನ್ನು ಎದುರು ಮಾತಾಡುವ ಶಕ್ತಿ ಮೋದಿಗಿಲ್ಲ. ಯಾಕೆ ಪ್ರತಿಪಕ್ಷ ರಾಹುಲ್ ಗಾಂಧಿಯವರ ಎದುರು ನಿಂತು ಮಾತಾಡುವ ಧೈರ್ಯ ಕೂಡ ಮೋದಿಗಿಲ್ಲ ಎಂದು ಜನ ಹೇಳತೊಡಗಿದ್ದಾರೆ.
ಕೊನೆಯದಾಗಿ ಹೇಳುವುದಾದರೆ:
ರಾಹುಲ್ ಗಾಂಧಿ ಸವಾಲನ್ನು ಇಲ್ಲಸಲ್ಲದಂತೆ ಮಾಡಲು ಬಿಜೆಪಿ ಸಂಘಪರಿವಾರದಿಂದ ಶತಪ್ರಯತ್ನ ನಡೆಯುತ್ತಿದೆ. ಅಮಿತ್ ಶಾ ರವರು ಮೋದಿಯನ್ನು ಸಂರಕ್ಷಿಸಲು ಬ್ಯಾಟ್ ಹಿಡಿದು ಸುತ್ತಾಡುತ್ತಿದ್ದಾರೆ. ಎಸ್ಐಆರ್ ಬಗ್ಗೆ ಚರ್ಚಿಸುವುದಾದರೆ ರಾಹುಲ್ ಪತ್ರ ಬರೆಯಲಿ ಸಂಸತ್ತಿನ ವಿಶೇಷ ಅಧಿವೇಶನ ಕರೆಯಲು ಸಿದ್ಧ ಎಂದು ಹೇಳುತ್ತಿದ್ದಾರೆ. ರಾಹುಲ್ ಹೇಳುವ ಪ್ರಕಾರ ಸಂಸತ್ತು ಸರಕಾರದ ವಿರುದ್ಧ ಚರ್ಚೆಗೆ ಉತ್ತಮ ಸ್ಥಳ ಅಲ್ಲ. ಸ್ಪೀಕರ್ ರಾಹುಲ್ ಮಾತಾಡುವಾಗ ಸಂಸತ್ತಿನ ಮೈಕ್ ಬಂದ್ ಮಾಡಿಸುತ್ತಾರೆ. ಗದ್ದಲ ಎಬ್ಬಿಸಿ ಸರಿಯಾದ ಚರ್ಚೆಗೆ ಅಡ್ಡಪಡಿಸಲಾಗುತ್ತಿದೆ. ಹೀಗಾಗಿ ರಾಹುಲ್ ಅವರನ್ನು ಬಹಿರಂಗ ಚರ್ಚೆಗೆ ಕರೆದಿರುವುದು. ಇವರಿಗೆ ಚರ್ಚೆ ಸಂಸತ್ತಿನಲ್ಲೇ ಯಾಕೆ ಬೇಕು. ಅಲ್ಲಿ ಎನ್ಡಿಎ ಸಂಖ್ಯೆ ಹೆಚ್ಚಿದ್ದಾರೆ. ಎಸ್ಐಆರ್ ಒಂದೇ ರಾಹುಲ್ ಆಹ್ವಾನಿಸಿದ ಚರ್ಚೆಯ ಮಿತಿಯಲ್ಲ. ದೇಶದ್ರೋಹ ಚರ್ಚೆಯ ವಸ್ತು ಆಗಿದೆ. ಇತರೇ ವಿಚಾರಗಳನ್ನು ಸಾರ್ವಜನಿಕವಾಗಿ ಚರ್ಚಿಸಿದರೆ ಆ ಚರ್ಚೆಯಲ್ಲಿ ವ್ಯಕ್ತವಾಗುವ ತಥ್ಯ ಸತ್ಯಗಳನ್ನು ಜಗತ್ತು ನೋಡುತ್ತದೆ. ಬಿಜೆಪಿ ಸರಕಾರ ಮತ್ತು ಮೋದಿಯನ್ನು ಎಲ್ಲರೂ ಅಳೆಯುವಂತಾಗುತ್ತದೆ. ಟೆಲಿಪ್ರಾಂಪ್ಟರ್ ಇಲ್ಲದೆ ಮೋದಿಗೆ ಮಾತು ಬರುವುದಿಲ್ಲ ಎಂದು ಪ್ರತಿಪಕ್ಷಗಳ ಐಟಿ ಸೆಲ್ ಛೇಡಿಸುತ್ತಿರುವುದಕ್ಕೂ ಸವಾಲು ಸ್ವೀಕರಿಸದ ಮೋದಿ ಪ್ರವೃತ್ತಿ ಪತ್ರಿಕಾಗೋಷ್ಠಿಗೆ ಹೆದರಿಕೆಗಳು ಸಾಕ್ಷ್ಯ ನುಡಿಯುತ್ತದೆ. ಕಳೆದ ಹದಿನಾಲ್ಕು ವರ್ಷಗಳಲ್ಲಿ ಪ್ರಧಾನಿ ಒಂದ್ಸಲವಾದರೂ ಪತ್ರಿಕಾಗೋಷ್ಠಿ ನಡೆಸಿಲ್ಲ. ಮನ್ ಕೀ ಬಾತ್, ಭಾಷಣಗಳು ಸ್ಕ್ರಿಪ್ಟೆಡ್ ಅನ್ಸುತ್ತೆ. ಹಾಗೆ ಓದಿ ಹೇಳುವುದಕ್ಕೆ ಪ್ರಧಾನಿಯೇ ಆಗ್ಬೇಕಿಲ್ಲ. ಆಂಕರ್ಗಳಿದ್ದಾರೆ.












