ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಸೆ.19: ಪೊಲೀಸ್ ಠಾಣೆಗಳಲ್ಲಿ ಇನ್ನು ಮುಂದೆ ಯೋಗ ಮತ್ತು ಧ್ಯಾನ ಹಾಗೂ ವ್ಯಾಯಾಮಗಳನ್ನು ಜಾರಿಗೊಳಿಸಲು ಕೇರಳದ ಪೊಲೀಸ್ ಮುಖ್ಯಸ್ಥರು ಸೂಚಿಸಿದ್ದಾರೆ. ಪೊಲೀಸರ ಮಾನಸಿಕ ಸಂಘರ್ಷ ಕಡಿಮೆ ಮಾಡುವುದು, ಸಾರ್ವಜನಿಕರೊಂದಿಗೆ ವರ್ತನೆಯನ್ನು ಉತ್ತಪಡಿಸುವುದಕ್ಕಾಗಿ ಈ ಸೂಚನೆಯೆನ್ನಲಾಗಿದೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರು, ಸಬ್ಡಿವಿಷನಲ್ ಅಧಿಕಾರಿಗಳು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಇತರ ಅಧಿಕಾರಿಗಳಿಗೆ ಪ್ರೇರಣೆ ನೀಡಬೇಕೆಂದು ಅವರು ಹೇಳಿದ್ದಾರೆ.
ಸರಿಯಾಗಿ ಭಾಷೆ ಗೊತ್ತಿಲ್ಲದ ಅಧಿಕಾರಿಗಳನ್ನು ಹುಡುಕಿ ಅವರಿಗೆ ಸಾರ್ವಜನಿಕರೊಂದಿಗೆ ನಿರಂತರ ವ್ಯವಹರಿಸುವ ಕೆಲಸಗಳಿಂದ ದೂರ ಇರಿಸಲು ಕೂಡ ಸೂಚಿಸಲಾಗಿದೆ. ಮಾನಸಿಕ ಒತ್ತಡ ಎದುರಿಸುವ ಪೊಲೀಸ್ ಅಧಿಕಾರಿಗಳಿಗೆ ಕೌನ್ಸಿಲಿಂಗ್ ನೀಡಲು ತಿರುವನಂತಪುರಂ ಎಎಪಿ ಕ್ಯಾಂಪಿನ ಹ್ಯಾಸ್ಟ್ ಸೆಂಟರಿನಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂದೆ ಜಿಲ್ಲಾ ಕೇಂದ್ರಗಳಲ್ಲಿಯೂ ಕೌನ್ಸಿಲಿಂಗ್ ಸೆಂಟರ್ ಸ್ಥಾಪನೆಯಾಗಲಿದ್ದು, ಕೌನ್ಸಿಲರ್ಗಳು ಮತ್ತು ಮನಶಾಸ್ತ್ರಜ್ಞರ ಸೇವೆಯನ್ನು ಪಡೆಯಲಾಗುವುದು.












