ತಮ್ಮ ಪರ ಸುದ್ದಿ ಪ್ರಕಟಿಸುವ ಮಾಧ್ಯಮಗಳಿಗೆ ಹಣದ ವಾಗ್ದಾನ ನೀಡಿದ ಝಾರ್ಕಂಡ್ ಬಿಜೆಪಿ ಸರಕಾರ!

0
736

ಹೊಸದಿಲ್ಲಿ, ಸೆ.19: ಝಾರ್ಕಂಡ್ ಸರಕಾರದ ಕಲ್ಯಾಣ ಯೋಜನೆಗಳನ್ನು ವರದಿ ಮಾಡುವ ಮಾಧ್ಯಮಗಳಿಗೆ ಹಣವನ್ನು ಕೊಡುವುದಾಗಿ ಅಲ್ಲಿನ ಬಿಜೆಪಿ ಸರಕಾರ ಹೇಳಿಕೊಂಡಿದೆ. ಸರಕಾರಿ ಯೋಜನೆ ವರದಿ ಮಾಡುವ ಪ್ರಿಂಟ್, ದೃಶ್ಯ ಮಾಧ್ಯಮ ವಾರ್ತೆಗಳಿಗೆ 15,000ರೂಪಾಯಿಯ ಕೊಡುಗೆಯನ್ನು ರಘುಭರ್‌ದಾಸ್ ಸರಕಾರ ತಿಳಿಸಿದೆ.

ಸಾರ್ವಜನಿಕ ಸಂಪರ್ಕ ಇಲಾಖೆ ಕಳೆದ ದಿಸವ ಇದಕ್ಕೆ ಸಂಬಂಧಿಸಿದ ಜಾಹೀರಾತನ್ನು ನೀಡಿದ್ದು ಸರಕಾರದ ಕ್ರಮವನ್ನು ಪ್ರತಿಪಕ್ಷ ಬಲವಾಗಿ ಟೀಕಿಸಿದೆ. ಸರಕಾರ ಸರ್ವಮೌಲ್ಯಗಳನ್ನು, ನೈತಿಕತೆಗಳನ್ನು ಗಾಳಿಗೆ ತೂರಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಝಾರ್ಕಂಡ್ ಮುಕ್ತಿ ಮೋರ್ಚ ನಾಯಕ ಹೇಮಂದ್ ಸೊರೆನ್ ಆರೋಪಿಸಿದ್ದಾರೆ.

ಯೋಜನೆಯಲ್ಲಿ ಆಯ್ಕೆ ಮಾಡಿದ ವಿಷಯಗಳ ವರದಿ ಮಾಡಲು ಬಯಸುವ ಪತ್ರಕರ್ತರು ಅರ್ಜಿ ಸಲ್ಲಿಸಬೇಕು. ನಂತರ ಸಮಿತಿಯೊಂದು ಪತ್ರಕರ್ತರನ್ನು ಗುರುತಿಸಿ ಒಂದು ವಾರದಲ್ಲಿ ವರದಿ ಸಲ್ಲಿಸಲು ಸೂಚಿಸಲಿದೆ. ಒಂದು ಬಾರಿ ವರದಿ ನೀಡಿದರೆ 15,000 ರೂಪಾಯಿ ಕೊಡಲಾಗುವುದು 25 ವರದಿಗಳನ್ನು ಸಾರ್ವಜನಿಕ ಸಂಪರ್ಕ ಇಲಾಖೆ ಪುಸ್ತಕವಾಗಿ ಪ್ರಕಟಿಸಿ ಪ್ರಚಾರ ನಡೆಸಲಿದೆ. ನಂತರ ಬರಹಗಾರರಿಗೆ 5000ರೂಪಾಯಿ ಬಹುಮಾನ ನೀಡಲಾಗುವುದು. ಪತ್ರಕರ್ತರ ಬೇಡಿಕೆಯಂತೆ ಈ ಯೋಜನೆಯನ್ನು ಸರಕಾರ ಪ್ರಕಟಿಸಿದೆ ಎಂದು ಬಿಜೆಪಿ ವಕ್ತಾರ ದೀನ್ ದಯಾಲ್ ಹೇಳಿದರು.