ಝಾಕಿರ್ ನಾಯ್ಕ್‌ಗೆ ಪುನಃ ಸಮನ್ಸ್

0
669

ಸನ್ಮಾರ್ಗ ವಾರ್ತೆ

ಮುಂಬೈ,ಸೆ.19: ಕಪ್ಪುಹಣ ಪ್ರಕರಣದಲ್ಲಿ ಇಸ್ಲಾಮೀ ಬೋಧಕ ಡಾ.ಝಾಕಿರ್ ನಾಯ್ಕ್‌ರಿಗೆ ಪುನಃ ಬಂಧನ ವಾರಂಟ್ ಹೊರಡಿಸಲಾಗಿದೆ. ಕಪ್ಪುಹಣ ಬಿಳಿ ಮಾಡಿದ್ದಾರೆನ್ನಲಾದ ಅವರಿಗೆ ಪಿಎಂಎಲ್‍ಎ ಕಾನೂನು ಪ್ರಕಾರ ಪ್ರಕರಣದಲ್ಲಿ ವಿಚಾರಣೆ ನಡೆಸುವ ಕೋರ್ಟು ಸಮನ್ಸ್ ಹೊರಡಿಸಿದೆ.

ನಾಯ್ಕ್ ವಿರುದ್ಧ ತನಿಖೆ ನಡೆಸಲು ಇಡಿ ಡೈರಕ್ಟರೇಟ್ ಆಗ್ರಹಿಸಿದ್ದರಿಂದ ಸಮನ್ಸ್‌ನ್ನು ಕೋರ್ಟ್ ಹೊರಡಿಸಿದೆ. ಇದು ಐದನೆ ಬಾರಿ ಹೊರಡಿಸಲಾದ ಸಮನ್ಸ್ ಆಗಿದೆ. ಅವರು 2016ರಿಂದ ಭಾರತದಿಂದ ಹೊರಗಿದ್ದಾರೆ. ಇಡಿ ಮುಂದೆ ಹಾಜರಾಗಲು ಅವರಿಗೆ ಸಮನ್ಸ್‌ನಲ್ಲಿ ಸೂಚಿಸಲಾಗಿದೆ.