‘ದಿಗ್ವಿಜಯ್ ಸಿಂಗ್ ಹಿಂದೂ ವಿರೋಧಿ’: ಭೋಪಾಲದಲ್ಲಿ ಪೋಸ್ಟರ್‌ಗಳ ಸುರಿಮಳೆ

0
488

ಸನ್ಮಾರ್ಗ ವಾರ್ತೆ

ಭೋಪಾಲ,ಸೆ.20: “ಕೇಸರಿ ಬಟ್ಟೆ ಧರಿಸಿದವರು ಅತ್ಯಾಚಾರ ಮಾಡುತ್ತಿದ್ದಾರೆ. ಅದು ದೇಗುಲಗಳಲ್ಲಿಯೂ ನಡೆಯುತ್ತಿದೆ” ಎಂದು ಮಧ್ಯಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‍ನ ಹಿರಿಯ ನಾಯಕರಾದ ದಿಗ್ವಿಜಯ ಸಿಂಗ್ ಹೇಳಿದ್ದು ವಿವಾದಕ್ಕೊಳಗಾಗಿದ್ದು, ಇವರ ಹೇಳಿಕೆಯನ್ನು ಹಿಂದುತ್ವವಾದಿ ಸಂಘಟನೆಗಳು ತೀವ್ರವಾಗಿ ವಿರೋಧಿಸಿವೆ.

‘ದಿಗ್ವಿಜಯ ಸಿಂಗ್ ಹಿಂದೂ ವಿರೋಧಿ” ಎಂದು ಬರೆದ ಪೋಸ್ಟರ್‌ಗಳು ಭೋಪಾಲ್ ನಗರದಲ್ಲಿ ಕಾಣಿಸಿಕೊಂಡಿದೆ. ಹಲವು ದೇವಸ್ಥಾನಗಳ ಮುಂಭಾಗದಲ್ಲಿಯೂ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ದೇವಸ್ಥಾನದ ಬಾಗಿಲನ್ನು ಸಿಂಗ್‍ರಿಗೆ ಮುಚ್ಚಬೇಕೆಂದು ಕೂಡ ಕರೆ ನೀಡಲಾಗಿದೆ.