ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.20: ಮಾಜಿ ಕೇಂದ್ರ ಸಚಿವ, ಬಿಜೆಪಿ ನಾಯಕ ಸ್ವಾಮಿ ಚಿನ್ಮಯಾನಂದರನ್ನು ಬಂಧಿಸಲಾಗಿದ್ದು ಅವರ ವಿರುದ್ದ 23 ವರ್ಷದ ಕಾನೂನು ವಿದ್ಯಾರ್ಥಿನಿಯ ಅತ್ಯಾಚಾರ ಆರೋಪ ಪ್ರಕರಣ ದಾಖಲಾಗಿದೆ. ಶಾಜಹಾನ್ ಪುರ ಆಶ್ರಮದಿಂದ ಚಿನ್ಮಯಾನಂದರನ್ನು ಪೊಲೀಸರು ಬಂಧಿಸಿದ್ದು ನಿನ್ನೆ ಅವರ ಆಶ್ರಮದಲ್ಲಿ ತಪಾಸಣೆ ನಡೆಸಿ ಗಂಟೆಗಟ್ಟಲೆ ಪ್ರಶ್ನಿಸಿದ್ದರು.
ವಿಶೇಷ ತನಿಖಾ ತಂಡ, ಮ್ಯಾಜಿಸ್ಟ್ರೇಟ್ ಮತ್ತು ದಿಲ್ಲಿ ಪೊಲೀಸರ ಮುಂದೆ ವಿದ್ಯಾರ್ಥಿನಿಯು ಹೇಳಿಕೆ ನೀಡಿದ್ದು 43 ವೀಡಿಯೊಗಳಿರುವ ಪೆನ್‍ಡ್ರೈವನ್ನು ಸಾಕ್ಷ್ಯವಾಗಿ ತನಿಖಾ ತಂಡಕ್ಕೆ ನೀಡಿದ್ದಳು.
ಇದರ ನಂತರವೂ ಚಿನ್ಮಯಾನಂದ ವಿರುದ್ಧ ಕ್ರಮ ಜರುಗಿಸಿರಲಿಲ್ಲ. ಇದನ್ನು ವಿರೋಧಿಸಿ ವ್ಯಾಪಕ ಪ್ರತಿಭಟನೆ ವ್ಯಕ್ತವಾಗಿತ್ತು. ಚಿನ್ಮಯಾನಂದ ಟ್ರಸ್ಟ್‌ನ ಕಾಲೇಜು ವಿದ್ಯಾರ್ಥಿನಿಯೇ ಚಿನ್ಮಯಾನಂದನಿಂದ ಅತ್ಯಾಚಾರಕ್ಕೆ ಗುರಿಯಾಗಿದ್ದಾಳೆ. ಇದನ್ನು ಆಕೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ಬಹಿರಂಗಪಡಿಸಿದ್ದಳು.
ಸುಪ್ರೀಂಕೋರ್ಟು ಮಧ್ಯಪ್ರವೇಶಿಸಿದ ಬಳಿಕ ಸೆಪ್ಟಂಬರ್ ಮೂರರಂದು ಪ್ರಕರಣ ತನಿಖೆಗೆ ಉತ್ತರಪ್ರದೇಶ ಸರಕಾರ ವಿಶೇಷ ತನಿಖಾ ತಂಡವನ್ನು ರೂಪಿಸಿತ್ತು. ಶಾಜಹಾನ್‌ಪುರ ಲಾ ಕಾಲೇಜು, ಪಿಜಿ ಕಾಲೇಜು ಪ್ರಿನ್ಸಿಪಾಲ್‍ಗಳನ್ನೂ ತನಿಖಾ ತಂಡ ಪ್ರಶ್ನಿಸಿತು. 2011ರಲ್ಲಿಯೂ ಚಿನ್ಮಯಾನಂದ ವಿರುದ್ಧ ಆಶ್ರಮ ನಿವಾಸಿ ಯುವತಿಯ ಮೇಲೆ ಅತ್ಯಾಚಾರವೆಸಗಿದ್ದನೆಂಬ ಬಲವಾದ ಆರೋಪ ಕೇಳಿ ಬಂದಿತ್ತು.












