ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.20: ಆರ್ಥಿಕ ಬಿಕ್ಕಟ್ಟನ್ನು ಮೀರಿ ನಿಲ್ಲಲು ಹೊಸ ವಿನಾಯಿತಿಗಳನ್ನು ಕೇಂದ್ರ ಸರಕಾರ ಪ್ರಕಟಿಸಿದ್ದು, ಭಾರತದ ಕಂಪೆನಿಗಳ ಕಾರ್ಪೊರೇಟ್ ತೆರಿಗೆ ಕಡಿಮೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪತ್ರಕಾಗೋಷ್ಠಿಯಲ್ಲಿ ಹೇಳಿದರು.
ಮೇಕ್ ಇನ್ ಇಂಡಿಯಾ ಯೋಜನೆಯನ್ನು ಬಲ ಪಡಿಸಲು ಉತ್ಪಾದನಾ ಕ್ಷೇತ್ರದ ಹೊಸ ಕಂಪೆನಿಗಳಿಗೆ ವಿನಾಯತಿ ಘೋಷಿಸಿದ್ದಾರೆ. ಕಳೆದ ಬಜೆಟ್‍ನಲ್ಲಿ ಘೋಷಿಸಿದ್ದ ಸರ್‍ಜಾರ್ಜ್ ಸಂಗ್ರಹಿಸುವುದಿಲ್ಲ ಎಂದು ಅವರು ತಿಳಿಸಿದರು. ಜಿಎಸ್‍ಟಿ ಕೌನ್ಸಿಲ್ ಸಭೆಗೂ ಮೊದಲು ವಿತ್ತ ಸಚಿವೆ ಪತ್ರಿಕಾಗೋಷ್ಠಿ ಕರೆದು ಸರಕಾರದ ನಿರ್ಧಾರವನ್ನು ತಿಳಿಸಿದ್ದು ಜಿಎಸ್‍ಟಿ ಸಭೆಯ ಬಳಿಕವೇ ಇದಕ್ಕೆ ಅಧಿಕೃತ ಅಂಗೀಕಾರ ಸಿಗಲಿದೆ.












