ಸನ್ಮಾರ್ಗ ವಾರ್ತೆ
ಟೆಹ್ರಾನ್,ಸೆ.20: ಸೌದಿ ಅರೇಬಿಯಾದ ಅರಾಮ್ಕೊ ತೈಲಾಗಾರದ ಮೇಲೆ ನಡೆದ ದಾಳಿಗೆ ಇರಾನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಿ ದಾಳಿಗಿಳಿದರೆ ಅದಕ್ಕೆ ತಕ್ಕ ಉತ್ತರ ನೀಡಲಾಗುವುದು ಎಂದು ಇರಾನ್ ಮುನ್ನೆಚ್ಚರಿಕೆ ನೀಡಿದೆ. ನೀವು ದಾಳಿ ಮಾಡಿದರೆ ನಾವು ಸುಮ್ಮನಿರುವುದಿಲ್ಲ ತಿರುಗೇಟು ನೀಡೇ ನೀಡುತ್ತೇವೆಂದು ಇರಾನಿ ವಿದೇಶ ಸಚಿವ ಅಹ್ಮದ್ ಜವಾದ್ ಸಾರಿಫ್ ಹೇಳಿದರು.
ಅಮೆರಿಕ, ಸೌದಿ ಅರೇಬಿಯ ಯಾರೆ ಇರಲಿ ಅವರಿಂದ ಎಂತಹುದೇ ದಾಳಿ ನಡೆಯಲಿದೆ ಅದಕ್ಕೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತೇವೆ. ಇದು ಸಮಗ್ರ ಯುದ್ಧದೆಡೆಗೆ ಹೋಗಲು ಕಾರಣವೂ ಆಗಬಹುದು. ಆದರೆ ನಮಗೆ ಯುದ್ಧ ಬೇಡ ಎಂದು ಸಾರಿಫ್ ಹೇಳಿದರು.
ನಮಗೆ ಯುದ್ಧಬೇಡ. ಸೇನಾ ಘರ್ಷಣೆಗೂ ನಮಗೆ ಮನಸ್ಸಿಲ್ಲ. ಆದರೆ ನಾವು ನಮ್ಮ ಪ್ರದೇಶವನ್ನು ಕಣ್ಣೆವೆ ಮುಚ್ಚದೆ ರಕ್ಷಿಸಿಕೊಳ್ಳುತ್ತೇವೆ ಎಂದು ಸಾರಿಫ್ ಹೇಳಿದರು.
ಕಳೆದ ಶನಿವಾರ ಅರಾಮ್ಕೊ ಮೇಲೆ ಎರಡು ಡ್ರೋನ್ ದಾಳಿ ನಡೆದಿತ್ತು. ಇದಕ್ಕೆ ಯಮನ್ನ ಇರಾನ್ ಬೆಂಬಲಿತ ಹೂಥಿಗಳನ್ನು ಹೊಣೆ ಎಂದು ಹೇಳಿದ್ದರು. ಆದರೆ, ದಾಳಿಯನ್ನು ಇರಾನ್ ಮಾಡಿದೆ ಕ್ರೂಯೂಸ್ ಮಿಸೈಲ್ ದಾಳಿಗೆ ಬಳಸಲಾಗಿದೆ. ಇದು ಯುದ್ಧ ಸಮಾನಾಪರಾಧ ಎಂದು ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪೊಂಪಿಯೊ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಾರಿಫ್ ಅಮೆರಿಕ ಮತ್ತು ಸೌದಿ ಅರೆಬಿಯಾಕ್ಕೆ ತೀಕ್ಷ್ಣ ಎಚ್ಚರಿಕೆ ನೀಡಿದರು.












