ಸನ್ಮಾರ್ಗ ವಾರ್ತೆ
ಕೇರಳ,ಸೆ.20: ಕಾರಂದೂರಿನ ಮರ್ಕಝಿನ ನೇತೃತ್ವದಲ್ಲಿ ಶೀಘ್ರದಲ್ಲೇ ಮರ್ಕಝ್ ನಾಲೆಜ್ ಸಿಟಿ ಆರಂಭಗೊಳ್ಳಲಿದ್ದು ಇದು ಇನ್ನಷ್ಟೇ ಆರಂಭವಾಗಬೇಕಿದೆ. ಆದರೆ ಸೆಂಟರ್ನ ನಿರ್ಮಾಣ ಕಾಮಗಾರಿ ಮುಂದಿನ ವರ್ಷ ಮಾರ್ಚ್ ಆಗುವ ವೇಳೆ ಪೂರ್ಣಗೊಳ್ಳಲಿದೆ ಎಂದು ಪದಾಧಿಕಾರಿಗಳು ಹೇಳಿದ್ದಾರೆ. ನವೀನ ಮರ್ಕಝ್ ನಾಲೆಜ್ ಸಿಟಿಯಲ್ಲಿ ಕಲ್ಚರಲ್ ಸೆಂಟರ್(ಸಂಸ್ಕೃತಿ ಕೇಂದ್ರ)ವೂ ಅಸ್ತಿತ್ವಕ್ಕೆ ಬರಲಿದೆ. ಮುಂದಿನ ವರ್ಷ ಕಲ್ಚರ್ ಸಿಟಿಯ ನಿರ್ಮಾಣ ಪೂರ್ಣವಾದರೆ ಅಲ್ಲಿ ಕಲ್ಚರಲ್ ಸೆಂಟರನ್ನು ಕೂಡ ತೆರೆಯಲಾಗುವುದು ಎಂದು ನಾಲೆಜ್ ಸಿಟಿ ಪದಾಧಿಕಾರಿಗಳು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.












