ಸುಪ್ರೀಂಕೋರ್ಟಿನಲ್ಲಿ ಅನರ್ಹ ಶಾಸಕರ ಅರ್ಜಿ ವಿಚಾರಣೆ ಆರಂಭ

0
439

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.23: ಕಾಂಗ್ರೆಸ್ ವಕೀಲ ಕಪಿಲ್ ಸಿಬಲ್ ಅನುಪಸ್ಥಿತಿಯಿಂದಾಗಿ ಒಂದು ಗಂಟೆ ತಡವಾಗಿ ಅನರ್ಹ ಶಾಸಕರ ಕುರಿತ ಅರ್ಜಿ ವಿಚಾರಣೆ ಆರಂಭವಾಗಿದ್ದು, ಅನರ್ಹ ಶಾಸಕರ ಪರ ವಕೀಲ ಮುಕುಲ್ ರೋಹ್ಟಗಿ ವಾದ ಮಂಡಿಸುತ್ತಿದ್ದಾರೆ. ಶಾಸಕರ ರಾಜೀನಾಮೆ ಸ್ವೀಕರಿದದೇ ಅವರನ್ನು ಸ್ಪೀಕರ್ ಅನರ್ಹರನ್ನಾಗಿಸಿದ್ದಾರೆ. ಇದು ಏಕಪಕ್ಷೀಯ ತೀರ್ಮಾನವೆಂದು ರೋಹ್ಟಗಿ ಕೋರ್ಟು ಮುಂದೆ ಹೇಳಿದರು.

ಹದಿನೈದು ಶಾಸಕರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಚುನಾವಣಾ ಆಯೋಗ ಈಗಾಗಲೇ ಚುನಾವಣಾ ಘೋಷಣೆಯನ್ನು ಮಾಡಿದೆ. ಇದರಿಂದ ತ್ರಿಶಂಕು ಸ್ಥಿತಿಯಲ್ಲಿರುವ ಅನರ್ಹ ಶಾಸಕರಿಗೆ ಇಂದು ಕೋರ್ಟು ನೀಡುವ ತೀರ್ಪು ನಿರ್ಣಾಯಕವಾಗಿರುತ್ತದೆ. ಕನಿಷ್ಠ ಪಕ್ಷ ಚುನಾವಣಾ ದಿನಾಂಕವನ್ನು ಮುಂದೂಡುವಂತೆ ಮಾಡಲು ಸಾಧ್ಯವೆ ಎಂದು ಅನರ್ಹ ಶಾಸಕರ ಪರ ವಕೀಲರು ಯತ್ನಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.