ಸನ್ಮಾರ್ಗ ವಾರ್ತೆ
ಹ್ಯೂಸ್ಟನ್,ಸೆ.28: ಭಾರತ ಮೂಲದ ಪೊಲೀಸಧಿಕಾರಿ ಸಿಖ್ ವಿಭಾಗದ ವ್ಯಕ್ತಿ ಸಂದೀಪ್ ಸಿಂಗ್ ದಲಿವಾಲ್(40) ಗುಂಡೇಟಿಗೀಡಾಗಿ ಮೃತಪಟ್ಟಿದ್ದಾರೆ. ಅವರು ಟೆಕ್ಸಾಸ್‍ನ ಡೆಪ್ಯೂಟಿ ಪೊಲೀಸ ಅಧಿಕಾರಿಯಾಗಿದ್ದರು. ಸಿಖ್ ವಿಭಾಗದಲ್ಲಿ ಅಮೆರಿಕದ ಪೊಲೀಸ್ ಇಲಾಖೆಗೆ ಆಯ್ಕೆ ಮೊತ್ತ ಮೊದಲ ವ್ಯಕ್ತಿ ಕೂಡ ಆಗಿದ್ದಾರೆ. ಅಲ್ಲಿನ ಸಮಯ ಮಧ್ಯಾಹ್ನ ಒಂದು ಗಂಟೆಗೆ ಟೆಕ್ಸಾಸ್‍ನ ಹಾರಿಸ್ ಕೌಂಟಿಯಲ್ಲಿ ಟ್ರಾಫಿಕ್ ಸ್ಟಾಪ್‍ನಲ್ಲಿ ಘಟನೆ ನಡೆದಿದೆ.
ಟ್ರಾಫಿಕ್ ಡ್ಯೂಟಿಯಲ್ಲಿದ್ದ ಸಂದೀಪ್‍ರಿಗೆ ಕಾರಿನಲ್ಲಿ ಬಂದ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಟ್ರಾಫಿಕ್ ನಿಯಮ ಉಲ್ಲಂಘಿಸಿದ್ದನ್ನು ಸಂದೀಪ್ ಪ್ರಶ್ನಿಸಿದ್ದು ಕಾರಿನಲ್ಲಿದ್ದವನನ್ನು ರೊಚ್ಚಿಗೇಳುವಂತೆ ಮಾಡಿತ್ತು. ಮಹಿಳೆ ಸಹಿತ ಇಬ್ಬರು ಕಾರಿನಲ್ಲಿದ್ದರು. ಗುಂಡು ಹಾರಿಸಿದ ಬಳಿಕ ಆತ ಸಮೀಪದ ಶಾಪಿಂಗ್ ಸೆಂಟರ್‌ಗೆ ಓಡಿ ಹೋಗಿದ್ದಾನೆ. ಕೊಲೆ ಮಾಡಿದ ವ್ಯಕ್ತಿ ಆತನ ಜೊತೆಗಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಸಂದೀಪ್ ದಲಿವಾಲ್ ಎಲ್ಲರಿಗೂ ಮಾರ್ಗದರ್ಶಿಯಾದ ವ್ಯಕ್ತಿ ಎಂದು ಕಮಿಶನರ್ ಗ್ರೇಶ್ಯ ಹೇಳಿದರು. ಅಭಿಮಾನದಿಂದ ಅವರು ತಮ್ಮ ಸಮುದಾಯವನ್ನು ಪ್ರತಿನಿಧಿಸುತ್ತಿದ್ದರು. ಹಾರ್ವ ಬಿರುಗಾಳಿಯ ವೇಳೆ ಆಹಾರ ವಸ್ತುಗಳನ್ನು ವಿತರಿಸಿದ್ದು ಸಹಿತ ಹಲವು ಸಹಾಯಗಳನ್ನು ಜನರಿಗೆ ಒದಗಿಸಿದ್ದೆಂದು ಗ್ರೇಶ್ಯ ತಿಳಿಸಿದರು. ಹತ್ತು ವರ್ಷದಿಂದ ಹ್ಯಾರಿಸ್ ಕೌಂಟಿ ಪೊಲೀಸ್ ಠಾಣೆಯಲ್ಲಿ ಅವರು ಕೆಲಸ ಮಾಡುತ್ತಿದ್ದರು. ಸಿಖ್ ವಿಭಾಗದ ಆಚಾರದಂತೆ ಅವರು ತಲೆಗೆ ಪೇಟ ಧರಿಸುತ್ತಿದ್ದರು. ಗಡ್ಡವೂ ಇತ್ತು. ಇದಕ್ಕೆ ಪೊಲೀಸ್ ಇಲಾಖೆ ಅವರಿಗೆ ಅನುಮತಿ ನೀಡಿತ್ತು.












