ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.28: ಇಂದ್ರಾಣಿ ಮುಖರ್ಜಿಯವರನ್ನು ಭೇಟಿಯಾಗಿದ್ದೇ ನೆನಪಿಲ್ಲ ಎಂದು ಐಎನ್‍ಎಕ್ಸ್ ಮೀಡಿಯಾ ಪ್ರಕರಣದಲ್ಲಿ ಜೈಲಿನಲ್ಲಿರುವ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಹೇಳಿದ್ದಾರೆ.
ವಿತ್ತ ಸಚಿವರನ್ನು ಭೇಟಿಯಾಗಲು ನೂರಾರು ಮಂದಿ ಬರುತ್ತಾರೆ. ಸಂದರ್ಶಕ ರಿಜಿಸ್ಟ್ರೀ ಪರಿಶೀಲಿಸಿ ಈ ವಿಷಯವನ್ನು ಖಚಿತಪಡಿಸಬಹುದು ಎಂದು ದಿಲ್ಲಿ ಹೈಕೋರ್ಟಿನಲ್ಲಿ ವಾದದ ವೇಳೆ ತಿಳಿಸಿದರು. ಆದರೆ, ಇಂದ್ರಾಣಿ ಮುಖರ್ಜಿಯನ್ನು ಭೇಟಿಯಾಗಿದ್ದ ದಿನದ ಸಂದರ್ಶನ ರಿಜಿಸ್ಟ್ರಿಯ ಪುಟ ಇಲ್ಲ. ಅದನ್ನು ನಾಶಪಡಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ ಹೇಳಿದರು. ಇಂದ್ರಾಣಿ ಮುಖರ್ಜಿಯೊಂದಿಗೆ ಯಾವುದೇ ಸಂಬಂಧ ಇಲ್ಲ ಎಂದು ವಕೀಲ ಕಪಿಲ್ ಸಿಬಲ್ ವಾದವನ್ನು ಖಂಡಿಸುತ್ತಾ ತುಷಾರ್ ಮೆಹತಾ ಹೇಳಿದರು.
ಐಎನ್‍ಎಕ್ಸ್ ಮೀಡಿಯ ಪ್ರಕರಣದಲ್ಲಿ ಇಂದ್ರಾಣಿ ಮುಖ್ಯ ಸಾಕ್ಷಿಯಾಗಿದ್ದಾರೆ. ಇಂದ್ರಾಣಿ ಪತಿ ಪೀಟರ್ ಮುಖರ್ಜಿ ಮೊದಲಾದವರು ಐಎನ್‍ಎಕ್ಸ್ ಮೀಡಿಯ ಪ್ರಕರಣದಲ್ಲಿದ್ದು ವಿದೇಶಿ ಹಣ ಸ್ವೀಕರಿಸಲು, ವಿದೇಶ ಹೂಡಿಕೆ ಪ್ರೋತ್ಸಾಹ ಬೋರ್ಡಿನ ಅನುಮತಿ ಪತ್ರ ಲಭಿಸಲು ಅಂದು ವಿತ್ತ ಸಚಿವರಾದ ಚಿದಂಬರಂ ಸಹಾಯ ಮಾಡಿದ್ದರೆಂದು ಕೇಸು ದಾಖಲಿಸಲಾಗಿದೆ. ಚಿದಂಬರಂರ ಪುತ್ರ ಕಾರ್ತಿಯ ಕಂಪೆನಿಗೆ ವಿದೇಶ ಹಣ ಪಡೆದು ಐಎನ್‍ಎಕ್ಸ್ ಅನುಮತಿ ಪಡೆಯಲಾಗಿತ್ತು ಎಂದು ಇಂದ್ರಾಣಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ.












