ಅಸ್ಸಾಂ ಪೌರತ್ವ ಪಟ್ಟಿಯಿಂದ ಹೊರಗಾದವರೂ ಮತಹಾಕಬಹುದು- ಚುನಾವಣಾ ಆಯೋಗ

0
426

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.28: ಅಸ್ಸಾಂ ಪೌರತ್ವ ಪಟ್ಟಿಯಲ್ಲಿಲ್ಲದವರು ಕೂಡ ಚುನಾವಣೆಯಲ್ಲಿ ಭಾಗವಹಿಸಿ ಮತಹಾಕಲು ಅನುಮತಿ ನೀಡಲಾಗಿದೆ. ಪೌರತ್ವ ಪಟ್ಟಿಯಿಂದ ಹೊರಗಾದವರ ಕುರಿತು ವಿದೇಶ ಟ್ರಿಬ್ಯೂನಲ್ ಅಂತಿಮ ತೀರ್ಮಾನ ತಳೆಯುವವರೆಗೆ ಇವರಿಗೆ ಮತದಾನ ಹಕ್ಕು ನೀಡಲಾಗುವುದು ಎಂದು ಚುನಾವಣಾ ಆಯೋಗ ತೀರ್ಮಾನಿಸಿದೆ.

ಅಂತಿಮ ಪಟ್ಟಿಯಿಂದ ಹೊರಗಿಟ್ಟವರನ್ನು ಸಂಶಯಾಸ್ಪದ ಮತದಾರರಾಗಿ ಘೋಷಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ತಿಳಿಸಿದರು. ಪೌರತ್ವ ಪಟ್ಟಿಯಲ್ಲಿ ಶಂಕಿತರನ್ನು ಅಸ್ಸಾಮಿನಲ್ಲಿ ಸಂಶಯಾಸ್ಪದ ಡಿ ವಿಭಾಗಕ್ಕೆ ಸೇರಿಸಲಾಗಿತ್ತು.

1977ರಲ್ಲಿ ಚುನಾವಣೆ ಆಯೋಗ ಈಶಾನ್ಯ ರಾಜ್ಯಗಳಲ್ಲಿ ಇಂತಹದೊಂದು ಪ್ರಯೋಗ ಆರಂಭಿಸಿತ್ತು. ಆಗಸ್ಟ್ 31ಕ್ಕೆ ಪ್ರಕಟವಾದ ರಾಷ್ಟ್ರೀಯ ಪೌರತ್ವ ಪಟ್ಟಿಯಿಂದ ಅಸ್ಸಾಮಿನ 19 ಲಕ್ಷ ಮಂದಿ ಹೊರಗಿದ್ದಾರೆ. ಇವರಿಗೆ ಪೌರತ್ವ ಸಾಬೀತುಪಡಿಸಲು 120 ದಿವಸಗಳ ಅವಕಾಶ ನೀಡಲಾಗಿದೆ. ಇದಕ್ಕಾಗಿ 100 ವಿದೇಶಿ ಟ್ರಿಬ್ಯೂನಲ್‍ಗಳನ್ನು ರಾಜ್ಯ ಸರಕಾರ ಸ್ಥಾಪಿಸಿದೆ.