ಮಸೀದಿಗಳಲ್ಲಿ ಶಸ್ತ್ರಾಸ್ತ್ರ ಶೇಖರಣೆ ಮಾಡಲಾಗುತ್ತದೆ ಎಂದ ಪ್ರಹ್ಲಾದ್ ಜೋಶಿ

0
1667

ಮೈಸೂರು: ಭಾರತೀಯ ಜನತಾ ಪಕ್ಷದ ನಾಯಕ ಹಾಗೂ ಲೋಕ ಸಭಾ ಸಚಿವರಾದ ಪ್ರಹ್ಲಾದ್ ಜೋಶಿ ಮುಸ್ಲಿಮರ ವಿರುದ್ದ ಅವಹೇಳನಕಾರಿ ಹೇಳಿಕೆಯನ್ನು ನೀಡಿದ್ದಾರೆ.
ಜೋಶಿ ಸದರ್ಸೋಫಾಕ್ಕೆ ಬೇಟಿ ನೀಡಿದ ವೇಳೆ ” ಸದರ್ಸೋಫಾ ಮಿನಿ ಪಾಕಿಸ್ತಾನದಂತಾಗಿದೆ. ಮತ್ತು ಶಸ್ತ್ರಾಸ್ತ್ರಗಳನ್ನು ಸ್ಥಳೀಯ ಮಸೀದಿಗಳಲ್ಲಿ ಶೇಖರಿಸಿಡಲಾಗುತ್ತಿದೆ‌”. ಎಂದು ಕಳೆದ ತಿಂಗಳು ಹತರಾದ ಗುರು ಸಿದ್ಧಪ್ಪರವರ ಮನೆಗೆ ಭೇಟಿನೀಡಿದ ಸಂದರ್ಭದಲ್ಲಿ ವರದಿಗಾರರನ್ನುದ್ದೇಶಿಸಿ ಈ ಹೇಳಿಕೆಯನ್ನು ನೀಡಿದ್ದರು.
ಒಂದು ಸಮುದಾಯದವರ ವಿರುದ್ಧ ಜೋಶಿಯು ಅವಹೇಳನಕಾರಿ ಆರೋಪವನ್ನು ಹೊರೆಸಿರುವುದನ್ನು ಖಂಡಿಸಿ ಮುಹಮ್ಮದ್ ಹನೀಫ್ ರವರು ಹುಬ್ಬಳ್ಳಿ ಜಿಲ್ಲೆಯ ಕಸ್ಬಾ ಪೋಲಿಸ್ ಠಾಣೆಯಲ್ಲಿ ಜೋಶಿಯವರ ವಿರುದ್ಧ ದೂರು ದಾಖಲಿಸಿದ್ದಾರೆ‌.
ಜೋಶಿಯವರ ಮೇಲೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153 A( ಧಾರ್ಮಿಕ ಗುಂಪುಗಳ ನಡುವೆ ದ್ವೇಷ ಬಿತ್ತುವಿಕೆ) ಮತ್ತು ಸೆಕ್ಷನ್ 298 ( ಇತರೆ ಧರ್ಮೀಯರ ಭಾವನೆಗಳಿಗೆ ಧಕ್ಕೆ ತರುವ ಮಾತುಗಳನ್ನು ಹೇಳುವಿಕೆ) ಸೇರಿದಂತೆ ಇತರೆ ವಿಧಿಗಳನ್ನು ಪ್ರಕಾರ ದೂರನ್ನು ದಾಖಲಿಸಲಾಗಿದೆ.
ಅಮಿತ್ ಶಾ ರವರ ಕರ್ನಾಟಕ ಭೇಟಿಯ ವೇಳೆ ನೀಡಲಾದ ಭಾಷಣದ ಅನುವಾದವನ್ನು ತಪ್ಪಾಗಿ ಓದಿದ ಪ್ರಹ್ಲಾದ್ ಜೋಶಿಯವರು” ನರೇಂದ್ರ ಮೋದಿಯವರು ದಲಿತರಿಗೆ ಯಾವುದೇ ರೀತಿ ಉಪಯುಕ್ತ ಕಾರ್ಯಗಳನ್ನು ಕೈಗೊಳ್ಳುವುದಿಲ್ಲ. ಅವರು ಈ ದೇಶವನ್ನು ನಾಶ ಮಾಡುತ್ತಾರೆ” ಎಂದು ಹೇಳುವ ಮೂಲಕ ಸುದ್ದಿಗೀಡಾಗಿದ್ದರು.