ಚಿನ್ಮಯಾನಂದರನ್ನು ಉತ್ತರಪ್ರದೇಶ ಸರಕಾರ ರಕ್ಷಿಸುತ್ತಿದೆ- ಪ್ರಿಯಾಂಕಾ ಗಾಂಧಿ

0
499

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.30: ಅತ್ಯಾಚಾರ ಕೇಸು ದಾಖಲಿಸದೆ ಉತ್ತರಪ್ರದೇಶ ಬಿಜೆಪಿ ಸರಕಾರ ಮಾಜಿ ಕೇಂದ್ರ ಸಚಿವ ಸ್ವಾಮೀ ಚಿನ್ಮಯಾನಂದರನ್ನು ರಕ್ಷಿಸುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಆರೋಪಿಸಿದ್ದಾರೆ. ಸಂತ್ರಸ್ತೆ ದೂರು ನೀಡಿದರೂ ಚಿನ್ಮಯಾನಂದರ ವಿರುದ್ಧ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಲ್ಲ ಎಂದು ಪ್ರಿಯಾಂಕಾ ಟ್ವಿಟರ್‌ನಲ್ಲಿ ಆರೋಪಿಸಿದರು. ಚಿನ್ಮಯಾನಂದರ ವಿರುದ್ಧ ದೂರು ನೀಡಿದ ಅತ್ಯಾಚಾರಕ್ಕೊಳಗಾದ ವಿದ್ಯಾರ್ಥಿನಿಯನ್ನೇ ಪೊಲೀಸರು ಬಂಧಿಸಿ ಜೈಲಿಗೆ ದೂಡಿದ್ದಾರೆ.