ಜಸ್ಟಿಸ್ ವಿಜಯ ತಹಿಲ್‍ರಮಣಿ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟು ಆದೇಶ

0
480

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಸೆ.30: ಮದ್ರಾಸ್ ಹೈಕೋರ್ಟು ಮುಖ್ಯ ನ್ಯಾಯಾಧೀಶೆಯಾಗಿದ್ದ ವಿಜಯ ತಹಿಲ್‍ರಮಣಿಯವರ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ. ತಹಿಲ್‍ರಮಣಿ ವಿರುದ್ಧ ಇಂಟಲಿಜೆನ್ಸ್ ವರದಿಯ ಆಧಾರದಲ್ಲಿ ಸುಪ್ರೀಂಕೋರ್ಟು ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಆದೇಶ ಹೊರಡಿಸಿದ್ದಾರೆ. ಮೇಘಾಲಯ ಹೈಕೋರ್ಟಿನ ಚೀಫ್ ಜಸ್ಟಿಸ್ ಆಗಿ ತನ್ನ ವರ್ಗಾವಣೆಯಾಗಿರುವುದನ್ನು ವಿರೋಧಿಸಿ ರಮಣಿ ರಾಜೀನಾಮೆ ನೀಡಿದ್ದರು.

ಚೆನ್ನೈಯ ಸೆಮಂಚೆರಿ, ತಿರುವಿಡಂದೈಗಳಲ್ಲಿ ವಿಜಯರಮಣಿ 3.28 ಕೋಟಿ ರೂಪಾಯಿಯ ಎರಡು ಫ್ಲಾಟ್‍ಗಳನ್ನು ಖರೀದಿಸಿದ್ದರು. ಇದರಲ್ಲಿ ಒಂದೂವರೆ ಕೋಟಿ ರೂಪಾಯಿ ಬ್ಯಾಂಕ್ ಸಾಲ ಆಗಿತ್ತು.  ಉಳಿದ ಹಣದ ಮೂಲ ಎಲ್ಲಿಂದ ಬಂದಿದೆ ಎಂದು ಅವರು ತಿಳಿಸಿಲ್ಲ ಎಂಬುದಾಗಿ ಸಿಬಿಐ ತನಿಖೆಯಲ್ಲಿ ಪತ್ತೆಯಾಗಿತ್ತು. ವಿಜಯ ತಹಿಲ್ ರಮಣಿಯವರ ಹೆಸರಿನಲ್ಲಿ ಆರು ಬ್ಯಾಂಕ್ ಖಾತೆಗಳಿದ್ದವು. ಇದರ ವಹಿವಾಟಿನ ಕುರಿತು ತನಿಖೆ ನಡೆಸಬೇಕೆಂದು ಐಬಿ ವರದಿಯಲ್ಲಿ ತಿಳಿಸಿತ್ತು. ಐಬಿಯ ಐದು ಪುಟದ ವರದಿಯ ಆಧಾರದಲ್ಲಿ ರಮಣಿ ವಿರುದ್ಧ ಸಿಬಿಐ ತನಿಖೆಗೆ ಚೀಫ್ ಜಸ್ಟಿಸ್ ರಂಜನ್ ಗೊಗೊಯಿ ಆದೇಶಿಸಿದ್ದಾರೆ.