ಮಹಾರಾಷ್ಟ್ರ ಬಿಜೆಪಿಯಲ್ಲಿ ಮಹಾಜನ್‍ ಯುಗಕ್ಕೆ ಕೊನೆ!

0
743

ಸನ್ಮಾರ್ಗ ವಾರ್ತೆ

ಮುಂಬೈ,ಅ.7: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ನಾಲ್ವರು ಪ್ರಧಾನ ವ್ಯಕ್ತಿಗಳಿಗೆ ಬಿಜೆಪಿ ಟಿಕೆಟ್ ನೀಡಿಲ್ಲ. ಈ ರೀತಿ ಬಿಜೆಪಿಯಲ್ಲಿ ಪ್ರಮೋದ್ ಮಹಾಜನ್, ಗೋಪಿನಾಥ್ ಮುಂಡೆ ಯುಗಕ್ಕೆ ತೆರೆ ಎಳೆಯಲಾಗಿದೆ ಎಂಬ ಮಾತು ಕೇಳಿ ಬರುತ್ತಿದೆ.

ಏಕನಾಥ್ ಕಾಡ್ಸೆ, ವಿನೋದ್ ತಾವ್ಡೆ, ರಾಜ್ ಪುರೋಹಿತ್, ಪ್ರಕಾಶ್ ಮೆಹ್ತರು ಬಿಜೆಪಿಯಿಂದ ಟಿಕೆಟ್ ನಿರಾಕರಿಸಲ್ಪಟ್ಟವರು. ಆದರೂ ಗೋಪಿನಾಥ್ ಮುಂಡೆ ಪುತ್ರಿ ಫಡ್ನವಿಸ್ ಸರಕಾರದಲ್ಲಿ ಸಚಿವೆ, ಅವರ ಪುತ್ರಿ ಪಂಕಜಾ ಮುಂಡೆಗೆ ಟಿಕೆಟ್ ನೀಡಲಾಗಿದೆ. ಮಹಾಜನ್‍ರ ಪುತ್ರಿ ಪೂನಂ ಮುಂಬೈಯಲ್ಲಿ ಸಂಸದೆ ಆಗಿದ್ದಾರೆ. ಏಕನಾಥ್ ಕಾಡ್ಸೆ ಪುತ್ರಿ ರೋಹಿಣಿ ಕಾಡ್ಸೆಗೆ ಟಿಕೆಟ್ ನೀಡಲಾಗಿದೆ. ಈ ರೀತಿ ಮಹಾನಾಯಕರನ್ನು ಹೊರಗಿಟ್ಟು ಬಿಸಿ ತಟ್ಟದೆ ಮಹಾರಾಷ್ಟ್ರ ಬಿಜೆಪಿಯಲ್ಲಿ ನೋಡಲಾಗಿದೆ.

ಮುಂಬೈಯಲ್ಲಿ ಬಿಜೆಪಿ ಬೆಳವಣಿಗೆಗೆ ಮಹಾಜನ್, ಮುಂಡೆಯವರ ಪಾತ್ರ ಹಿರಿದಾಗಿತ್ತು. ಅದರಲ್ಲಿ ಶಿವಸೇನೆಯೊಂದಿಗೆ ಸಖ್ಯವೂ ಕುದುರಿತು. ಮಹಾಜನ್‍ರ ಸಾವಿನೊಂದಿಗೆ ಸಖ್ಯದಲ್ಲಿ ಏರುಪೇರು ಆಗಿತ್ತು. ಮುಂಡೆಯ ಸಾವಿನೊಂದಿಗೆ ಸಖ್ಯ ಮುರಿದು ಬಿದ್ದಿತ್ತು. ಪುನಃ ಶಿವಸೇನೆ, ಬಿಜೆಪಿ ಅಲ್ಲಿ ಮೈತ್ರಿ ಮಾಡಿಕೊಂಡರೂ ಮಾನಸಿಕವಾಗಿ ಎರಡು ಪಾರ್ಟಿ ನಿಕಟವಾಗಿಲ್ಲ. ಮಹಾಜನ್ ಕಾಲದಲ್ಲಿ ಕಾಡ್ಸೆ, ತಾವ್ಡೆ, ಪುರೋಹಿತ್ ಪ್ರಮುಖರಾಗಿದ್ದರು.

2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗ ಮುಖ್ಯಮಂತ್ರಿಯಾಗಲು ಹೆಚ್ಚು ಅರ್ಹ ವ್ಯಕ್ತಿ ಕಾಡ್ಸೆ ಎನ್ನಲಾಗಿತ್ತು. ಆದರೆ ಕಾಡ್ಸೆಯ ಬದಲು ಫಡ್ನವಿಸ್‍ರಿಗೆ ಮುಖ್ಯಮಂತ್ರಿ ಸ್ಥಾನ ನೀಡಲಾಯಿತು. ಕಾಡ್ಸೆಯವರ ವಿರುದ್ಧ ನಂತರ ಭ್ರಷ್ಟಾಚಾರ, ಭೂಗತ ಲೋಕದೊಂದಿಗೆ ಸಂಬಂಧ ಹೊಮದಿರುವ ಆರೋಪ ಕೇಳಿ ಬಂದಿತ್ತು. ಇದೇ ಆರೋಪದಲ್ಲಿ ಸಚಿವ ಸ್ಥಾನದಿಂದ ಅವರನ್ನು ಹೊರಗಿಡಲಾಗಿತ್ತು. ಮತ್ತು ಈಗ ಟಿಕೆಟ್ ನಿರಾಕರಿಸಲಾಗಿದೆ.