ಸೌದಿ ಅರೇಬಿಯ ಸಂಸ್ಕೃತಿಯ ನೇರದರ್ಶನ: ವೀಕ್ಷಕರ ಕಣ್ಮನ ಸೆಳೆಯುತ್ತಿರುವ ಅಲ್ ಅಮೂದಿ ಮ್ಯೂಸಿಯಂ

0
908

ಸನ್ಮಾರ್ಗ ವಾರ್ತೆ

ಜಿದ್ದ,ಅ.7:ಮಕ್ಕ ಎಕ್ಸ್‌ಪ್ರೆಸ್ ಹೈವೆ ಬದಿಯಲ್ಲಿ ಶುಮೈಸಿ ಚೆಸ್‍ಪೋಸ್ಟ್ ಬಳಿ ಇರುವ ಅಲ್ ಅಮೂದಿ ಮ್ಯೂಸಿಯಂ ಸಂದರ್ಶಕರಿಗೆ ವಿಸ್ಮಯವಾಗಿದೆ.

ಸೌದಿ ಅರೇಬಿಯದ ಸಂಸ್ಕೃತಿಯ ಎಲ್ಲ ಪಳೆಯುಳಿಕೆಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತಿದ್ದು ಪವಿತ್ರ ಕಾಬದ ಹಳೆಯ ಕಾಲದ ವೈಭವದಿಂದ ಹಿಡಿದು ಎಲ್ಲಿ ಎಲ್ಲವೂ ಮ್ಯೂಸಿಯಂನಲ್ಲಿದೆ. ಗ್ರಾಮೀಣ ವಾತಾವರಣದಿಂದ ದೂರವಿರುವ ಮರುಭೂಮಿಯ ನಡುವೆ ವಿಶಾಲವಾದ ಒಂದು ಕಂಪೌಂಡಿನಲ್ಲಿ ಅಮೂದಿ ಮ್ಯೂಸಿಯಂ ಇದೆ. ಇಲ್ಲಿ ನಿಮ್ಮನ್ನು ಭಿನ್ನ ರೀತಿಯಲ್ಲಿ ಸ್ವಾಗತಿಸಲಾಗುತ್ತಿದೆ.

ಗುಂಪುಗಳಾಗಿ ಮ್ಯೂಸಿಯಂ ನೋಡಲು ಬಂದವರನ್ನು ವಿಶೇಷ ಟೋಪಿ ನೀಡಿ ಧರಿಸಲು ತಿಳಿಸಲಾಗುವುದು. ಸೌದಿ ಅರೇಬಿಯದ ಬ್ಯಾನರಿನ ಕೆಳಗೆ ಗ್ರೂಪ್ ಫೋಟೊ ತೆಗೆದುಕೊಳ್ಳಲಾಗುವುದು. 35 ಸ್ಟಾಲ್‍ಗಳಲ್ಲಿ ವಿಧ ವಿಧದ ಪ್ರಾಚೀನ ವಸ್ತುಗಳು ಜೋಡಿಸಿ ಇಡಲಾಗಿದೆ. ಹಳೆಯ ಪವಿತ್ರ ಕುರ್‍ಆನ್ ಪ್ರತಿಗಳು ಹಜ್‍ ಕರ್ಮದಲ್ಲಿ ಕಲ್ಲೆಸೆಯುವ ಪ್ರಾಚೀನ ಜಮ್ರಾದ ರೂಪ. ಉಮ್ರಾದ ಹಳೆಯ ದಾಖಲೆಗಳಿಂದ ಪವಿತ್ರ ಕಅಬಕ್ಕೆ ಸಂಬಂಧಿಸಿದ ಹಲವು ವಸ್ತುಗಳು ಇಲ್ಲಿ ಇವೆ.

ಸೌದಿ ಪರಂಪರಾಗತ ಬಟ್ಟೆಗಳು, ವಿವಿಧ ರೀತಿಯ ತಲವಾರುಗಳು, ಆಯುಧಗಳು, ರೈತೋಪಕರಣಗಳು. ವಿವಿಧ ದೇಶಗಳ ನಾಣ್ಯಗಳು. ಚಿತ್ರಕುಸುರಿಯಿರುವ ಪಾತ್ರೆಗಳು, ಜೈಲು ಮಾದರಿ, ಜೈಲಿನ ಉಪಕರಣಗಳು, ಅರಬ್ ಆಹಾರಗಳನ್ನು ಬೇಯಿಸುವ ವಿವಿಧ ಉಪಕರಣಗಳು, ವಿವಿಧ ಪ್ರಾಣಿಗಳ ಅಸ್ತಿಪಂಜರ ಹೀಗೆ ಎಲ್ಲವೂ ಆಕರ್ಷಕವಾಗಿ ಜೋಡಿಸಿಡಲಾಗಿದೆ.

ಅರಬರಂತೆ ಬಟ್ಟೆಯನ್ನು ಧರಿಸಿ ಫೋಟೊ ತೆಗೆಸಿಕೊಳ್ಳುವ ಸೌಲಭ್ಯವೂ ಇದೆ. ಹಳೆಯ ಟ್ರಾನ್ಸಿಸ್ಟರ್, ಹೊಲಿಗೆ ಯಂತ್ರ, ಬಾವಿ, ಸಂಗೀತೋಪಕರಣಗಳು, ಹಳೆಯ ಸೌದಿ ಅರೇಬಿಯದ ಸಿನೆಮಾಗಳು. ಅದಕ್ಕೆ ಸಂಬಂಧಿಸಿದ ಉಪಕರಣಗಳು. ಅಸಂಖ್ಯ ಪ್ರಾಚೀನ ವಸ್ತುಗಳೂ ಹೀಗೆ ಅಲ್ ಸಮೂದಿ ಮ್ಯೂಸಿಯಂ ಹೆಚ್ಚು ಉಪಯುಕ್ತ ಮಾಹಿತಿ ಪಡೆಯುವ ಕೇಂದ್ರವೂ ಅಗಿದೆ.