ಸನ್ಮಾರ್ಗ ವಾರ್ತೆ
ಹೈದರಾಬಾದ್,ಅ.7: ಅಸೊಸಿಯೇಟೆಡ್ ಬ್ರಾಡ್ಕಾಸ್ಟಿಂಗ್ ಕಂಪೆನಿ ಪ್ರೈವೇಟ್ ಲಿಮಿಟೆಡ್(ಐಬಿಸಿಎಲ್) ನಿಂದ ಅನಧೀಕೃತವಾಗಿ 18 ಕೋಟಿ ರೂಪಾಯಿ ವಾಪಸು ಪಡೆದ ಪ್ರಕರಣದಲ್ಲಿ ಟಿವಿ9 ಚ್ಯಾನೆಲ್ ಮಾಜಿ ಸಿಇಒ ವಿ.ರವಿ ಪ್ರಕಾಶ್ರನ್ನು ಬಂಧಿಸಲಾಗಿದೆ. ಟಿವಿ9 ಚ್ಯಾನೆಲ್ ಪ್ರಮೋಟರ್ ಕಂಪೆನಿ ಎಬಿಸಿಎಲ್ ಆಗಿದೆ. ಎಬಿಸಿಎಲ್ ಡೈರಕ್ಟರ್ ಜಿ.ಸಿಂಗ ರಾವ್ ದೂರಿನಲ್ಲಿ ಬಂಜಾರ ಹಿಲ್ಸ್ ಪೊಲೀಸರು ಪ್ರಕಾಶರನ್ನು ಬಂಧಿಸಿದ್ದಾರೆ.
2018 ಸೆಪ್ಟಂಬರ್ ನಿಂದ 2019ರ ಮೇ ವರೆಗಿನ ಕಾಲಾವಧಿಯಲ್ಲಿ ಪ್ರಕಾಶ್ ಎಬಿಸಿಎಲ್ ಡೈರಕ್ಟರ್ ಎಂಕೆವಿಎನ್ ಮೂರ್ತಿ ಕ್ಲಿಫರ್ಡ್ ಫೆರರ ಸೇರಿ ಅಧಿಕಾರ ದುರಪಯೋಗಿಸಿ ಹದಿನೆಂಟು ಕೋಟಿ ರೂಪಾಯಿ ಡ್ರಾ ಮಾಡಿದ್ದಾರೆ ಎಂದು ಜಿ.ಸಿಂಗ ದೂರು ನೀಡಿದ್ದಾರೆ.












