ಇನ್ನೂ ಮೊಬೈಲ್, ಇಂಟರ್ನೆಟ್ ಸಂಪರ್ಕ ಪುನಃ ಸ್ಥಾಪನೆಯಾಗದ ಜಮ್ಮು-ಕಾಶ್ಮೀರದಲ್ಲಿ ಗುರುವಾರದಿಂದ ಪ್ರವಾಸಿಗರಿಗೆ ಪ್ರವೇಶ!

0
727

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.8: ರಾಜಕೀಯ ನಾಯಕರನ್ನು ಗೃಹ ಬಂಧನದಲ್ಲಿರಿಸಲಾಗಿರುವ, ಫೋನ್, ಇಂಟರ್ನೆಟ್ ಸಂಪರ್ಕ ಸಂಪೂರ್ಣವಾಗಿ ಪುನಃ ಸ್ಥಾಪನೆಗೊಳ್ಳದ ಜಮ್ಮು-ಕಾಶ್ಮೀರದಲ್ಲಿ ಗುರುವಾರದಿಂದ ಪ್ರವಾಸಿಗರಿಗೆ ಅನುಮತಿ ನೀಡಲಾಗುತ್ತಿದೆ.

ಜಮ್ಮು-ಕಾಶ್ಮೀದಲ್ಲಿ ಜನಜೀವನವಿನ್ನೂ ಸಾಮಾನ್ಯ ಸ್ಥಿತಿಗೆ ಮರಳಿಲ್ಲವಾಗಿಲ್ಲ. ಗುರುವಾರದಿಂದ ಪ್ರವಾಸಿಗರಿಗೆ ಪ್ರವೇಶ ನೀಡಲಾಗುವುದೆಂದು ತಿಳಿಸಲಾಗಿದೆ. ಆಗಸ್ಟಿನಲ್ಲಿ 370ನೇ ವಿಧಿ ರದ್ದು ಪಡಿಸಿದಂದಿನಿಂದ ಎರಡು ತಿಂಗಳುಗಳ ಕಾಲಾವಧಿಯವರೆಗೆ ಪ್ರವಾಸಿಗರಿಗೆ ಸಂಚಾರ ನಿಷೇಧ ಹೇರಲಾಗಿತ್ತು.

ರಾಜ್ಯಪಾಲ ಸತ್ಯಪಾಲ್ ಮಲಿಕ್ ರಾಜ್ಯದ ಸುರಕ್ಷೆಯ ಕುರಿತು ಅವಲೋಕನ ನಡೆಸಿದ್ದು ಪ್ರವಾಸಿಗರ ಸಂಚಾರ ನಿಷೇಧವನ್ನು ತೆರವುಗೊಳಿಸಿದ್ದಾರೆ. ಅಕ್ಟೋಬರ್ ಹತ್ತರಿಂದ ಪ್ರವಾಸಿಗರಿಗೆ ಪ್ರವೇಶ ಕಲ್ಪಿಸಲು ಅವರು ಸೂಚಿಸಿದ್ದಾರೆ ಎಂದು ಕಾಶ್ಮೀರದ ಅಧಿಕಾರಿಗಳು ಟ್ವೀಟ್ ಮಾಡಿದ್ದಾರೆ.

ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರಕಾರ ಜಮ್ಮು-ಕಾಶ್ಮೀರವನ್ನು ಕೇಂದ್ರಾಡಡಳಿತ ಪ್ರದೇಶವಾಗಿ ವಿಭಜಿಸಿದೆ. ಪ್ರತಿಭಟನೆಯಾಗದಂತೆ ನೋಡಿಕೊಳ್ಳಲು ಭಾರೀ ಸೈನಿಕರನ್ನು ಅಲ್ಲಿ ನಿಯೋಜಿಸಲಾಗಿದೆ.