ಗುಂಪು ಹತ್ಯೆ ಭಾರತಕ್ಕೆ ಅನ್ಯ: ಗುಂಪು ಹತ್ಯೆಗಳನ್ನು ಚಿತ್ರೀಕರಿಸಿ ದೇಶಕ್ಕೆ ಅಪಕೀರ್ತಿ ತರಲು ಯತ್ನಿಸಲಾಗುತ್ತಿದೆ- ಮೋಹನ್ ಭಾಗವತ್

0
980

ಸನ್ಮಾರ್ಗ ವಾರ್ತೆ

ನಾಗಪುರ,ಅ.8: ದೇಶದಲ್ಲಿ ನಡೆಯುತ್ತಿರುವ ದಾಳಿಗಳನ್ನು ಗುಂಪು ಹತ್ಯೆಯಾಗಿ ಚಿತ್ರಿಕರಿಸಿ ದೇಶಕ್ಕೆ ಅಪಕೀರ್ತಿ ತರಲು ಶ್ರಮಿಸಲಾಗುತ್ತಿದೆ ಎಂದು ಆರ್‌ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ಆರೆಸ್ಸೆಸ್ ಸ್ಥಾಪಕ ದಿನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಮಾತಾಡುತ್ತಿದ್ದರು. ದೇಶದಲ್ಲಿ ನಡೆಯುವ ಎಲ್ಲ ಅತಿಕ್ರಮಗಳನ್ನು ಸಂಪೂರ್ಣ ಗುಂಪು ಹತ್ಯೆಯಾಗಿ ಹೇಳುವ ಮೂಲಕ ದೇಶ ಮತ್ತು ಹಿಂದೂ ಸಮಾಜವನ್ನು ಅಪಕೀರ್ತಿಗೆ ತಳ್ಳಲು ಮತ್ತು ಇತರ ಸಮುದಾಯಗಳ ನಡುವೆ ಭಯ ಹುಟ್ಟಿಸಲು ಬಳಸಲಾಗುತ್ತಿದೆ.

ಜನರ ಗುಂಪು ಕೊಲೆ ಎಂಬುದು ಪಾಶ್ಚಾತ್ಯರ ನಿರ್ಮಿತಿಯಾಗಿದೆ. ಭಾರತಕ್ಕೆ ಜನರ ಗುಂಪು ಹತ್ಯೆ ಎನ್ನುವುದು ಅನ್ಯ ವಿಚಾರವಾಗಿದೆ. ಅಂತಹ ಹೇಳಿಕೆಗಳನ್ನು ಭಾರತೀಯರ ನಡುವೆ ಹರಡಲಾಗುತ್ತಿದೆ ಎಂದು ಭಾಗವತ್ ಹೇಳಿದರು.

ವಿಕಾಸಗೊಂಡ ಭಾರತದಲ್ಲಿ ಕೆಲವು ಸ್ವಹಿತಾಸಕ್ತಿಗಳಿಂದ ಭೀತಿ ಸೃಷ್ಟಿಸಲಾಗುತ್ತಿದೆ. ಅವರು ದೇಶವನ್ನು ಯಾವತ್ತೂ ಶಕ್ತ ಮತ್ತು ಪ್ರಬಲವಾಗಿಸಲು ಬಯಸುವುದಿಲ್ಲ. ದೇಶದ ಆಂತರಿಕ ದೃಢತೆ ಎಂದರೆ ಜಾತಿ, ಧರ್ಮ, ಭಾಷೆಗಳ ವೈವಿಧ್ಯವನ್ನು ಕೆಲವು ಸ್ಥಾಪಿತ ಹಿತಾಸಕ್ತಿಯಿರುವವರು ಪರಸ್ಪರ ಜನರು ಹೊಡೆದಾಡುವಂತೆ ಮಾಡಲು ಬಳಸುತ್ತಿದ್ದಾರೆ.

ಇವರನ್ನು ಗುರತಿಸಲು ಎಚ್ಚರ ವಹಿಸುವುದು ಅಗತ್ಯ. ಬೌದ್ಧಿಕ ಮತ್ತು ಸಾಮಾಜಿಕವಾಗಿ ಇವರನ್ನು ಎದುರಿಸಬೇಕು. ಭಿನ್ನಾಭಿಪ್ರಾಯ ಏನೇ ಇದ್ದರು ಉದ್ರೇಕಕಾರಿ ಯತ್ನಗಳು ನಡೆದರೂ ಸಂವಿಧಾನ ಪರಿಧಿಯಲ್ಲಿ ಸಮಾಜ ವರ್ತಿಸಬೇಕು. ದೇಶದ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇಡಬೇಕು. ಸಮಾಜದ ವಿವಿಧ ವಿಭಾಗಗಳು ಪರಸ್ಪರ ಸೌಹಾರ್ದ ಬೆಳೆಯುವಂತಾಗಲು ಕೆಲಸ ಮಾಡಬೇಕು. ಸಂಭಾಷಣೆ, ಪರಸ್ಪರ ಸಹಕಾರ ಜನರ ನಡುವೆ ಉಂಟಾಗಬೇಕು ಎಂದು ಅವರು ಹೇಳಿದರು.

ಕಾಶ್ಮೀರದ 370 ವಿಧಿ ರದ್ದುಪಡಿಸಿದ್ದಕ್ಕಾಗಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾರನ್ನು ಮೋಹನ್ ಭಾಗವತ್ ಅಭಿನಂದಿಸಿದರು.