ರಾಹುಲ್ ರಾಜೀನಾಮೆಯಿಂದ ಕಾಂಗ್ರೆಸ್ ಸೋಲಿನ ಅವಲೋಕನವೇ ಸಾಧ್ಯವಾಗಿಲ್ಲ- ಸಲ್ಮಾನ್ ಕುರ್ಶಿದ್

0
428

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಅ. 9: ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಗೆ ಕಾರಣವನ್ನು ಅವಲೋಕಿಸಲು ಸಾಧ್ಯವಾಗಿಲ್ಲ ಎಂದು ಮಾಜಿ ವಿದೇಶ ಸಚಿವ ಸಲ್ಮಾನ್ ಕುರ್ಶಿದ್ ಹೇಳಿದರು. ರಾಹುಲ್ ಗಾಂಧಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಇದು ಸಾಧ್ಯವಾಗಿಲ್ಲ ಎಂದು ಅವರು ಹೇಳಿದರು. ಸೋನಿಯಾ ಗಾಂಧಿ ಮಧ್ಯಂತರ ಅಧ್ಯಕ್ಷರಾಗಿ ತಾತ್ಕಾಲಿಕ ವ್ಯವಸ್ಥೆಯಡಿ ತಾನು ತೃಪ್ತನಲ್ಲ. ಯಾರೇ ಅಧ್ಯಕ್ಷರಾದರೂ ಕಾಯಂ ಆಗಿರಬೇಕೆಂಬುದು ನನ್ನ ಅಭಿಪ್ರಾಯವಾಗಿದೆ.

ಸೋಲು ಯಾಕಾಯಿತು ಎಂದು ಅವಲೋಕಿಸುವುದಕ್ಕೆ ಒಬ್ಬ ನಾಯಕನ ಅಗತ್ಯವಿದೆ. ಆದರೆ ನಾವು ದುರದೃಷ್ಟವಶಾತ್ ನಮ್ಮ ನಾಯಕನನ್ನು ಕಳಕೊಂಡೆವು ಎಂದರು. ರಾಹುಲ್ ಅಧ್ಯಕ್ಷನಾಗಿರಬೇಕಿತ್ತು ಎಂದು ತನಗೆ ಅನಿಸುತ್ತಿದೆ. ಅವರೇ ಮುಂದುವರಿಯಬೇಕೆನ್ನುವುದು ನಮ್ಮೆಲ್ಲರ ಇಚ್ಛೆಯಾಗಿದೆ ಎಂದು ಸಲ್ಮಾನ್ ಕುರ್ಶಿದ್ ಹೇಳಿದರು.