ಸನ್ಮಾರ್ಗ ವಾರ್ತೆ-
ಮುಂಬೈ, ಅ.9: ರಾಜಕೀಯ ನಾಯಕರನ್ನು ಪಾಕಿಸ್ತಾನ ಬೆಂಬಲಿಗರೆಂದು ಮುದ್ರೆಯೊತ್ತಿ ಇಲ್ಲದಂತೆ ಮಾಡುವುದು ಬಿಜೆಪಿಯ ಯತ್ನವಾಗಿದೆ ಎಂದು ಎನ್ಸಿಪಿ ರಾಷ್ಟ್ರೀಯ ಅಧ್ಯಕ್ಷ ಶರದ್ ಪವಾರ್ ಹೇಳಿದರು. ಪ್ರಧಾನಿ ಕಚೇರಿಯ ಅಂತಸ್ತು ಕಾಪಾಡುವುದರಲ್ಲಿ ನರೇಂದ್ರ ಮೋದಿ ವಿಫಲರಾಗಿದ್ದಾರೆ. ತುಂಬ ಪ್ರಧಾನ ಮತ್ತು ಸರಿಯಾದ ವಿವರಗಳನ್ನು ನೀಡುವ ಸಂಸ್ಥೆ ಪ್ರಧಾನಿ ಕಚೇರಿಯಾಗಿದೆ. ಆದರೆ, ತಾನೇ ದೊಡ್ಡ ಸಂಸ್ಥೆ ಎಂಬ ರೀತಿಯಲ್ಲಿ ಮೋದಿ ಮುಂದೆ ಸಾಗುತ್ತಿದ್ದಾರೆ ಎಂದು ಶರದ್ ಪವಾರ್ ಆರೋಪಿಸಿದರು.
ಪಾಕಿಸ್ತಾನ ಬೆಂಬಲಿಗನೆಂದು ನನ್ನನ್ನು ಮೋದಿ ಹೇಳಿದ್ದಾರೆ. ತಾನು ಪಾಕಿಸ್ತಾನದ ಬೆಂಬಲಿಗನಾಗಿದ್ದರೆ ಬಿಜೆಪಿ ಸರಕಾರ ಯಾಕೆ ತನಗೆ ಪದ್ಮಭೂಷಣ ನೀಡಿತು. ದೇಶದ ಸೇವೆಗಾಗಿ ಎರಡನೇ ಪರಮೋಚ್ಚ ಪ್ರಶಸ್ತಿ ಅದು. ಆದರೆ ಅದೇ ಸರಕಾರದ ಪ್ರಧಾನಿ ತನ್ನನ್ನು ಪಾಕಿಸ್ತಾನದ ಬೆಂಬಲಿಗ ಎಂದು ಹೇಳುತ್ತಿದ್ದಾರೆ. ಇದು ಸರಿಯಾದ ನಿಲುಮೆಯಲ್ಲ.
ಪಾಕಿಸ್ತಾನದ ನಾಯಕರು ಮಾತ್ರ ಭಾರತ ವಿರೋಧಿ ನಿಲುವು ತೆಗೆದುಕೊಳ್ಳುತ್ತಾರೆ ಎಂಬ ಪವಾರ್ ರ ಹೇಳಿಕೆಯನ್ನು ಬಿಜೆಪಿ ವಿವಾದಗ್ರಸ್ತಗೊಳಿಸಿತ್ತು.












