ಎಸ್. ಐ.ಓ ಉಳ್ಳಾಲ ಘಟಕದ ವತಿಯಿಂದ ಮಕ್ಕಳಿಗಾಗಿ ಫುಟ್ಬಾಲ್ ಟೂರ್ನಮೆಂಟ್: ಮರ್ಹೂಮ್ ಇಸ್ಮಾಯಿಲ್ ಔಸಾಫ್ ಮೆಮೋರಿಯಲ್ ಟ್ರೋಫಿ ಸೀಸನ್- 3

0
555

ಸನ್ಮಾರ್ಗ ವಾರ್ತೆ-

ಉಳ್ಳಾಲ: ಸ್ಟೂಡೆಂಟ್ ಇಸ್ಲಾಮಿಕ್ ಆರ್ಗನೈಸೆಷನ್ ಆಫ್ ಇಂಡಿಯಾ ಇದರ ಉಳ್ಳಾಲ ಘಟಕದ ವತಿಯಿಂದ ಮರ್ಹೂಮ್ ಇಸ್ಮಾಯಿಲ್ ಔಸಾಫ್ ರವರ ಸ್ಮರಣಾರ್ಥ ಮಕ್ಕಳಿಗಾಗಿ ಫುಟ್ಬಾಲ್ ಪಂದ್ಯಾಟವನ್ನು ಪ್ರೈಮ್ ಸ್ಪೋರ್ಟ್ಸ್ ಆರೆನಾ ಬಬ್ಬುಕಟ್ಟೆ ತೊಕ್ಕೊಟ್ಟು ಇಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಕರೀಂ, ಎಸ್. ಐ.ಓ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷರಾದ ರಿಝವಾನ್ ಅಝಹರಿ, ಸಾಗರ್ ಕಲೆಕ್ಷನ್ ತೊಕ್ಕೊಟ್ಟು ಇದರ ಇಸ್ಮಾಯಿಲ್ ಸಾಗರ್, ಪ್ರೈಮ್ ಸ್ಪೋರ್ಟ್ಸ್ ಅರೆನಾದ ಪಾಲುದಾರರಾದ ಇಸಾಕ್ ಸನ, ಯನೆಪೋಯ ಕಾಲೇಜಿನ ಉಪನ್ಯಾಸಕರಾದ ಡಾ. ಮುಬೀನ್ ಉಳ್ಳಾಲ್, ಈ ಎಚ್ ಮಹಮೂದ್, ಅಲ್ ಫುರ್ಖಾನ್ ಅರೇಬಿಕ್ ಇನ್ಸ್ಟಿಟ್ಯೂಟ್ ನ ಸಂಚಾಲಕರಾದ ಇಸಾಕ್ ಕಲ್ಲಾಪು, ಸಮಾಜ ಸೇವಾ ಘಟಕದ ಸಿ ಎಚ್ ಸಲಾಂ, ಎಸ್. ಐ.ಓ ಉಳ್ಳಾಲ ಘಟಕದ ಅಧ್ಯಕ್ಷರಾದ ನಿಝಾಮ್ ಉಳ್ಳಾಲ್ ಮೊದಲಾದ ಗಣ್ಯರು ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಜಾಹರೋಹಣದ ನಂತರ ಅತಿಥಿಗಳು ಆಟಗಾರರಿಗೆ ಶುಭ ಹಾರೈಸಿದರು.

ಚೆಂಡನ್ನು ಪೋಸ್ಟ್ ಗೆ ಹೊಡೆಯುವ ಮುಖಾಂತರ ಪಂದ್ಯಾಟಕ್ಕೆ ಅಧಿಕೃತ ಚಾಲನೆ ನೀಡಲಾಯಿತು. ಸುಮಾರು 25 ತಂಡಗಳು ಭಾಗವಹಿಸಿದ್ದು ಡಿ.ಎಕ್ಸ್ ಉಳ್ಳಾಲ ತಂಡವು ಚಾಂಪಿಯನ್ ಆಗಿ ಹೊರ ಹೂಮ್ಮಿತು, ಬ್ರದರ್ಸ್ ಉಚ್ಚಿಲ್ ತಂಡವು ರನ್ನರ್ ಗೆ ತೃಪ್ತಿ ಪಟ್ಟಿತು.

ಸಾಲಿಡಾರಿಟಿ ಯೂತ್ ಮೂಮೆಂಟ್ ಇದರ ಜಿಲ್ಲಾ ಅಧ್ಯಕ್ಷರಾದ ಪರ್ವೇಜ್ ಮತ್ತು ಜಮಾಆತೆ ಇಸ್ಲಾಮಿ ಉಳ್ಳಾಲ ಘಟಕದ ಕಾರ್ಯದರ್ಶಿ ಮುಝಮ್ಮಿಲ್ ಅಹ್ಮದ್ ವಿಜೇತರಿಗೆ ಬಹುಮಾನ ವಿತರಿಸಿದರು. ಬ್ರದರ್ ಮಾಯಿಜ್ ಕುರ್ ಆನ್ ಪಠಿಸಿದರು. ಅಶೀರುದ್ದಿನ್ ಆಲಿಯಾ ಮತ್ತು ಇರ್ಷಾದ್ ವೇಣೂರ್ ಕಾರ್ಯಕ್ರಮ ನೀರೂಪಿಸಿದರು.