ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.10: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಕೊಳ್ಳಲು ನವೆಂಬರ್ 30ರವರೆಗೆ ಗಡುವನ್ನು ವಿಸ್ತರಿಸಲಾಗಿದೆ.
ಮೂರು ಕಂತುಗಳಲ್ಲಿ ತಲಾ 6,000 ರೂಪಾಯಿ ದೇಶದ ರೈತರಿಗೆ ನೀಡುವುದು ಕಿಸಾನ್ ಸಮ್ಮಾನ್ ಯೋಜನೆಯಾಗಿದೆ. ಯೋಜನೆ ಪ್ರಕಾರ ಈವರೆಗೆ ಏಳು ಕೋಟಿ ರೈತರಿಗೆ ಈ ಸೌಲಭ್ಯ ಸಿಕ್ಕಿದೆ ಎಂದು ಸಚಿವ ಸಂಪುಟ ಸಭೆಯ ಬಳಿಕ ಪ್ರಕಾಶ್ ಜವೇಡ್‍ಕರ್ ಹೇಳಿದರು.
ನವೆಂಬರ್ ೩0ನೆಯ ತಾರೀಕಿನೊಳಗೆ ಆಧಾರ್ ಸಂಖ್ಯೆಯನ್ನು ಯೋಜನೆಯನ್ನು ಲಿಂಕ್ ಮಾಡದ ರೈತರಿಗೆ ಈ ಸೌಲಭ್ಯ ಪಡೆಯುವ ಅವಕಾಶ ಇಲ್ಲ. ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ, ರಾಷ್ಟ್ರೀಯ ಆರೋಗ್ಯ ಮಿಶನ್‍ನಲ್ಲಿ ಇನ್ನು ಸೇರದ ಪಶ್ಚಿಮ ಬಂಗಾಳ, ದಿಲ್ಲಿ ಸರಕಾರಗಳನ್ನು ಜಾವೆಡ್‍ಕರ್ ಟೀಕಿಸಿದರು. ಇವೆರಡು ರಾಜ್ಯಗಳು ಮಾತ್ರ ಯೋಜನೆಗೆ ಸೇರಿಲ್ಲ. ರಾಜ್ಯದ ಜನರಿಗೆ ಕೇಂದ್ರದ ಸೌಲಭ್ಯವನ್ನು ನಿರಾಕರಿಸುವ ಪರಿಸ್ಥಿತಿ ಈ ರೀತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದರು.












