ಜಿ.ಪರಮೇಶ್ವರ್ ಮನೆಗೆ ಐಟಿ ದಾಳಿ

0
468

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.10: ಕರ್ನಾಟಕ ಮಾಜಿ ಉಪಮುಖ್ಯಮಂತ್ರಿ, ಹಿರಿಯ ಕಾಂಗ್ರೆಸ್ ನಾಯಕ ಜಿ.ಪರಮೇಶ್ವರ್ ಮನೆಗೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿ ಪರಿಶೀಲಿಸಿದೆ. ಅವರ ಒಡೆತನದ ಕೋಲಾರದ ಮೆಡಿಕಲ್ ಕಾಲೇಜಿಗೂ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ.

ಬೆಳಗ್ಗೆ 6:30ಕ್ಕೆ ದಾಳಿ ಆರಂಭವಾಗಿದ್ದು ಮೆಡಿಕಲ್, ಇಂಜಿನಿಯರಿಂಗ್ ಕಾಲೇಜು ಪ್ರವೇಶಾತಿ ಮೂಲಕ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯನ್ನು ಪರಮೇಶ್ವರ್ ಅಕ್ರಮವಾಗಿ ಸಂಪಾದಿಸಿದ್ದಾರೆ ಎಂದು ಆದಾಯ ಇಲಾಖೆ ತಿಳಿಸಿದೆ. ಪರಮೇಶ್ವರ್‍‌ರಿಗೆ ಸಂಬಂಧಿಸಿದ ಸುಮಾರು 30 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎಂದು ಎಎನ್‍ಐ ವರದಿ ಮಾಡಿದೆ.

ಇದೇವೇಳೆ, ರಾಜಕೀಯ ಪ್ರೇರಿತ ದಾಳಿ ಇದೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. “ದಾಳಿಯನ್ನು ಸ್ವಾಗತಿಸುವೆ. ಆದರೆ ಅಕ್ರಮವಾಗಿ ಏನಾದರೂ ದಾಖಲೆಗಳು ಸಿಕ್ಕಿದ್ದರೆ ಅದನ್ನು ಬಹಿರಂಗಪಡಿಸಲಿ” ಎಂದು ಪರಮೇಶ್ವರ್ ಹೇಳಿದ್ದಾರೆ.