ಸನ್ಮಾರ್ಗ ವಾರ್ತೆ
ಬುಲಂದ್ ಶಹರ್,ಅ.11: ಉತ್ತರ ಪ್ರದೇಶದ ಬುಲಂದ್ ಶಹರಿನಲ್ಲಿ ರಸ್ತೆ ಬದಿ ಮಲಗಿದ್ದ ತೀರ್ಥಯಾತ್ರಿಕರ ಮೇಲೆ ಬಸ್ ಹರಿದ ಪರಿಣಾಮ ಒಂದೇ ಕುಟುಂಬದ ನಾಲ್ವರು ಮಹಿಳೆಯರು ಮೂವರು ಮಕ್ಕಳ ಸಹಿತ ಏಳು ಮಂದಿ ಮೃತಪಟ್ಟಿದ್ದಾರೆ.
ಸೌರಘಟ್ನಲ್ಲಿ ಗಂಗಾ ಸ್ನಾನ ಮಾಡಿ ಮರಳಿದ ತಂಡ ಅಪಘಾತಕ್ಕೊಳಗಾಗಿದೆ. ಉತ್ತರಪ್ರದೇಶದ ಹತ್ರಾಸ್ನಿಂದ ಬಂದಿದಿದ್ದವರು. ತೀರ್ಥಸ್ನಾನ ಮಾಡಿ ರಸ್ತೆ ಬದಿಯ ಫುಟ್ಪಾತ್ನಲ್ಲಿ ಮಲಗಿದ್ದರು. ನಿಯಂತ್ರಣ ಕಳಕೊಂಡ ಬಸ್ ಫುಟ್ಪಾತ್ ಮೇಲೆ ಹರಿದಿತ್ತು. ಅಪಘಾತ ಆದ ಕೂಡಲೇ ಬಸ್ ಚಾಲಕ ಪರಾರಿ ಆಗಿದ್ದಾನೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.












