ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.11: ತಾಯಿಯ ಕೈಯಲ್ಲಿದ್ದ ಮಗುವಿಗೆ ತಂದೆಯ ಬೆತ್ತಪ್ರಹಾರ ಬಿದ್ದಿದ್ದು ಮಗುವಿನ ದಾರುಣ ಸಾವಿಗೆ ಕಾರಣವಾಗಿದೆ. ಪತಿ-ಪತ್ನಿಯರಲ್ಲಿ ಜಗಳ ನಡೆಯುತ್ತಿತ್ತು. ಪತಿ ಬೆತ್ತ ತೆಗೆದು ಪತ್ನಿಗೆ ಹೊಡೆಯಲು ಬಂದಿದ್ದಾನೆ. ಬೆತ್ತದಲ್ಲಿ ಮೊಳೆಯು ತಾಯಿಯ ಕೈಯಲ್ಲಿದ್ದ ಮಗುವಿನ ಹಣೆಗೆ ಬಡಿದಿದ್ದು, ಐದು ತಿಂಗಳ ಗಂಡು ಮಗುವಿನ ಹಣೆಯ ಒಳಗೆ ಮೊಳೆಯು ನೆಟ್ಟ ಪರಿಣಾಮವಾಗಿ ಮಗು ಸಾವನ್ನಪ್ಪಿದೆ.
ಮಗುವಿನ ತಂದೆ ದಿಲ್ಲಿಯ ಗಾಝಿಯಾಬಾದ್ ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಕೊಠಡಿಯ ಸಿಬ್ಬಂದಿಯಾಗಿದ್ದು ಆತ ಬುಧವಾರ ನಡೆದ ದುರ್ಘಟನೆಯ ನಂತರ ತಲೆತಪ್ಪಿಸಿಕೊಂಡಿದ್ದಾನೆ. ಘಟನೆಯಲ್ಲಿ ಗಾಝಿಪುರ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.












