ಯುವಕರು ಉದ್ಯೋಗ ಎಲ್ಲಿ ಎಂದು ಪ್ರಶ್ನಿಸಿದರೇ ಚಂದ್ರನನ್ನು ನೋಡುವಂತೆ ಹೇಳಲಾಗುತ್ತಿದೆ- ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ರಾಹುಲ್ ಗಾಂಧಿ

0
560

ಸನ್ಮಾರ್ಗ ವಾರ್ತೆ

ಮುಂಬೈ,ಅ.14: ಕೆಲಸ ಎಲ್ಲಿ ಎಂದು ದೇಶದ ಯುವಕರು ಕೇಳುವಾಗ ಚಂದ್ರನನ್ನು ನೋಡಲು ಹೇಳಲಾಗುತ್ತಿದೆ ಎಂದು ಕೇಂದ್ರ ಸರಕಾರವನ್ನು ರಾಹುಲ್ ಗಾಂಧಿ ಟೀಕಿಸಿದ್ದಾರೆ. ದೇಶ ಎದುರಿಸುತ್ತಿರುವ ನೈಜ ಸಮಸ್ಯೆಗಳಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಚಂದ್ರಯಾನ ದೌತ್ಯವನ್ನು ಗಟ್ಟಿಹಿಡಿಯಲಾಗಿದೆ.

ಮಹಾರಾಷ್ಟ್ರದ ಲಾತೂರಿನಲ್ಲಿ ಚುನಾವಣಾ ರ‌್ಯಾಲಿಯಲ್ಲಿ ಅವರು ಮಾತಾಡುತ್ತಿದ್ದರು. ಆರ್ಟಿಕಲ್ 370 ಕುರಿತು ಪ್ರಶ್ನಿಸಿದರೆ ಚಂದ್ರಯಾನ ಕುರಿತು ಕೇಂದ್ರ ಸರಕಾರ ಹೇಳುತ್ತಿದೆ. ದೇಶ ಎದುರಿಸುತ್ತಿರುವ ಅಪಾರ ಸಮಸ್ಯೆಗಳ ಕುರಿತು ಮೌನವಹಿಸಲಾಗುತ್ತಿದೆ.

ಹದಿನೈದು ಶ್ರೀಮಂತರ 5.5 ಕೋಟಿ ಸಾಲವನ್ನು ಮೋದಿ ಸರಕಾರ ಮನ್ನಾ ಮಾಡಿದೆ. ನೋಟು ನಿಷೇಧದಿಂದ ಪ್ರಯೋಜನ ಆಗದಿದ್ದರೆ ತನ್ನನ್ನು ಗಲ್ಲಿಗೇರಿಸಿ ಎಂದು ಪ್ರಧಾನಿ ಹೇಳಿದ್ದರು. ನೋಟು ನಿಷೇಧದಿಂದ ಯಾರಿಗೆ ಲಾಭವಾಗಿದೆ ಎಂದು ರಾಹುಲ್‌ ಗಾಂಧಿ ಪ್ರಶ್ನಿಸಿದರು. ದೇಶದ ರೈತರ ಕುರಿತು, ನಿರುದ್ಯೋಗದ ಕುರಿತು ಮಾಧ್ಯಮಗಳು ಹೇಳುವುದೇ ಇಲ್ಲ ಎಂದು ರಾಹುಲ್ ಟೀಕಿಸಿದರು.