ಮೆಕ್ಸಿಕೊದಲ್ಲಿ ದುಷ್ಕರ್ಮಿಗಳ ತಂಡದಿಂದ 14 ಪೊಲೀಸರ ಹತ್ಯೆ

0
461

ಸನ್ಮಾರ್ಗ ವಾರ್ತೆ

ಮೆಕ್ಸಿಕೊ ಸಿಟಿ, ಅ.15: ಪಶ್ಚಿಮ ಮೆಕ್ಸಿಕೊದ ಅಗಿಲಿಲ್ ಮುನ್ಸಿಪಾಲಿಟಿ ವ್ಯಾಪ್ತಿಯಲ್ಲಿ ನಡೆದ ಗುಂಡು ಹಾರಾಟದಲ್ಲಿ ಹದಿನಾಲ್ಕು ಪೊಲೀಸರು ಮೃತಪಟ್ಟಿದ್ದು ಮೂವರು ಗಾಯಗೊಂಡಿದ್ದಾರೆ.

ನಗರದಲ್ಲಿ ಪೆಟ್ರೋಲಿಂಗ್ ನಡೆಸುತ್ತಿದ್ದ ಪೊಲೀಸ್ ವಾಹನದ ಮೇಲೆ ಪಿಕಪ್ ವ್ಯಾನ್‍ನಲ್ಲಿ ಬಂದ ಸಶಸ್ತ್ರ ತಂಡವೊಂದು ಯದ್ವಾತದ್ವಾ ಗುಂಡು ಹಾರಿಸಿತು ಎಂದು ಸೆಕ್ರಟರಿಯೇಟ್ ಆಫ್ ಸೆಕ್ಯೂರಿಟಿ ಆಂಡ್ ಸಿವಿಲಿಯನ್ ಪ್ರೊಟೆಕ್ಷನ್ ವಿಭಾಗ ತಿಳಿಸಿದೆ.

ದುಷ್ಕರ್ಮಿಗಳ ಪತ್ತೆಗೆ ಶೋಧ ಕಾರ್ಯ ಆರಂಭವಾಗಿದೆ. ದುಷ್ಕರ್ಮಿಗಳು ಶಿಕ್ಷೆಯಿಂದ ತಪ್ಪಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಮಿಚೊಗನ್ ರಾಜ್ಯ ಗವರ್ನರ್ ಸಿಲ್ವಾನೊ ಒರಿಯೊಲಸ್ ಕನೊಜೊ ಹೇಳಿದರು.