ಟನಿಸ್,ಅ.15: ಟುನಿಷ್ಯದಲ್ಲಿ ಲೆಕ್ಕಗಳನ್ನೆಲ್ಲ ಕಿತ್ತೆಸೆದು ಪಕ್ಷೇತರ ಅಭ್ಯರ್ಥಿ ಖೈಸ್ ಸಈದ್ ಅಧ್ಯಕ್ಷ ಸ್ಥಾನಕ್ಕೆ ಚುನಾಯಿತರಾಗಿದ್ದಾರೆ. ಹೊರ ಬಂದಿರುವ ಎಕ್ಸಿಟ್ ಫೋಲ್ ಫಲಿತಾಂಶ ಪ್ರಕಾರ ಕಾನೂನು ಪ್ರೊಫೆಸರ್ ಖೈಸ್ ಚುನಾಯಿತರಾಗಿದ್ದಾರೆ ಎಂಬ ಸೂಚನೆ ಲಭಿಸಿದೆ.
ಪ್ರತಿಸ್ಪರ್ಧಿ ಮಾಧ್ಯಮ ದೊರೆ ನಬಿಲ್ ಖರವಿಗೆ ಶೇ.30 ರಷ್ಟು ಮಾತ್ರ ವೋಟು ಸಿಕ್ಕಿದೆ. ರಾಜಕೀಯ ಪರಿಚಯ ಇಲ್ಲದ ವ್ಯಕ್ತಿ ಖೈಸ್ ಆಗಿದ್ದಾರೆ. ಯುವಕರು ಅವರಿಗೆ ಮಣೆ ಹಾಕಿದ್ದು ಅವರ ಗೆಲುವಿಗೆ ಕಾರಣ ಎನ್ನಲಾಗಿದೆ. ಶೇ. 90 ಯುವಕರು ಖೈಸ್‍ರಿಗೆ ವೋಟು ಹಾಕಿದರು. ಒಟ್ಟು ಚಲಾಯಿತ ಮತದಲ್ಲಿ ಶೇ.70ರಷ್ಟು ಖೈಸ್‍ಗೆ ಸಿಕ್ಕಿದೆ.
ಇನ್ನೊಂದೆಡೆ ಭ್ರಷ್ಟಾಚಾರ ಆರೋಪದಲ್ಲಿ ಸಿಲುಕಿದ ಖರವಿ ಮತದಾನ ನಡೆಯುವುದಕ್ಕಿಂತ ನಾಲ್ಕು ದಿವಸ ಮೊದಲು ಜೈಲಿನಿಂದ ಬಿಡುಗಡೆಯಾಗಿದ್ದರು. ಮುಖ್ಯಧಾರೆಯ ಪಕ್ಷಗಳು ಸಕ್ರಿಯವಾಗಿದ್ದ ಮೊದಲ ಹಂತದ ಚುನಾವಣೆಯಲ್ಲಿ ಯಾರಿಗೂ ಬಹುಮತ ಬಂದಿರಲಿಲ್ಲ. ಈಗಿನ ಪ್ರಧಾನಿ, ರಕ್ಷಣಾ ಸಚಿವರು ಸ್ಪರ್ಧಾ ಕಣದಲ್ಲಿದ್ದರು. ಖೈಸ್, ಮತ್ತು ಖರವಿ ಎರಡನೆ ಹಂತಕ್ಕೆ ಅರ್ಹತೆ ಗಳಿಸಿಕೊಂಡಿದ್ದರು.
ಅಧ್ಯಕ್ಷ ಬೆಯಿಜಿ ಖಾಯಿದ್ ನಿಧನರಾದ್ದರಿಂದ ನವೆಂಬರ್‍ನಲ್ಲಿ ನಡೆಯಬೇಕಾಗಿದ್ದ ಚುನಾವಣೆ ಸ್ವಲ್ಪ ಬೇಗ ನಡೆದಿತ್ತು. ದೊಡ್ಡ ಚುನಾವಣಾ ರ‌್ಯಾಲಿಯನ್ನು ಖೈಸ್ ಮಾಡಿರಲಿಲ್ಲ. ಯಾವುದೇ ರಾಜಕೀಯ ಪಕ್ಷದ ಸದಸ್ಯರಲ್ಲ. ಬಡತನವಿರುದ್ಧ ಅವರು ಅಭಿಯಾನ ನಡೆಸುತ್ತಿದ್ದರು. ಇದೇ ವೇಳೆ ನಸಮ ಎಂಬ ಖಾಸಗಿ ಟಿವಿಯ ಮಾಲಕ ಖೈಸ್ ವಿರುದ್ಧ ಸೋಲುಂಡ ಖರವಿ ಆಗಿದ್ದಾರೆ.












