ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.16: ಗಾಂಧಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ ವಿಚಾರಣೆ ಎದುರಿಸಿದ್ದ ಹಿಂದೂ ಮಹಾಸಭಾ ನಾಯಕ ವಿನಾಯಕ ದಾಮೋದರ ಸಾವರ್ಕರ್ಗೆ ಭಾರತ ರತ್ನ ನೀಡುವ ಯತ್ನಕ್ಕೆ ಬಿಜೆಪಿ ಚಾಲನೆ ನೀಡಿದ್ದು ಇದು ವಿವಾದಕ್ಕೆ ಕಾರಣವಾಗಿದೆ.
ಸಾವರ್ಕರ್ಗೆ ಭಾರತ ರತ್ನ ನೀಡುವಂತೆ ಮೋದಿ ಸರಕಾರದ ಮೇಲೆ ಒತ್ತಡ ಹಾಕುತ್ತೇವೆ ಎಂದು ಮಹಾರಾಷ್ಟ್ರ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಿಜೆಪಿ ಭರವಸೆ ನೀಡಿದೆ. ವಿಧಾನಸಭಾ ಚುನಾವಣೆಯಲ್ಲಿ ಗೆಲುವಿಗೆ ಹಾಕಿದ ಕಾರ್ಡ್ ಇದು ಮಾತ್ರವಲ್ಲ ಇದನ್ನು ಎತ್ತಿ ಹಿಡಿದು ಮಹಾರಾಷ್ಟ್ರದಲ್ಲಿ ಬಿಜೆಪಿ ಸಖ್ಯ ಪುನಃ ಅಧಿಕಾರಕ್ಕೆ ಬರುವ ಸಾಧ್ಯತೆಯನ್ನು ತಳ್ಳಿ ಹಾಕಲು ಸಾಧ್ಯವಿಲ್ಲ. ಸಾವರ್ಕರ್ಗೆ ಭಾರತ ರತ್ನಕ್ಕೆ ಯತ್ನಿಸುವುದು ವಿಜಯಕ್ಕೆ ನಿರ್ಬಂಧವಾಗಿರುವ ಘಟಕವಲ್ಲ. ಆದರೆ ಪ್ರಣಾಳಿಕೆಯಲ್ಲಿ ಅದನ್ನು ಬಿಜೆಪಿ ಸೇರಿಸಿದೆ.
ಭಾರತ ಹಿಂದೂ ರಾಷ್ಟ್ರವೆಂದು ಬಲವಾಗಿ ವಾದಿಸಿದ ಹಿಂದುತ್ವವಾದಿ ಸಾವರ್ಕರ್ ಆಗಿದ್ದು ಈ ಬಾರಿ ವಿಜಯದಶಮಿ ಭಾಷಣದಲ್ಲಿ ಆರೆಸ್ಸೆಸ್ ನಾಯಕ ಮೋಹನ್ ಭಾಗವತ್ ಹಿಂದೂ ರಾಷ್ಟ್ರದ ಗುರಿಯನ್ನು ಪುನರುಚ್ಚರಿಸಿದ್ದರು. ಸಾವರ್ಕರ್ಗೆ ಪರಮೋಚ್ಚ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಬೇಕೆನ್ನುವ ದೃಷ್ಟಿಕೋನ ಶಿವಸೇನೆಯೂ ಹೊಂದಿದೆ ಎನ್ನಲಾಗುತ್ತಿದೆ. ಮಹಾರಾಷ್ಟ್ರದ ಫಲಿತಾಂಶ ಹೇಗೆ ಬಂದರೂ ಸಾವರ್ಕರ್ಗೆ ಭಾರತ ರತ್ನ ನೀಡುವ ಛಲದಲ್ಲಿ ಬಿಜೆಪಿ ಇದೆ. ಹಿಂದುತ್ವ ವಾದಿ ನಾಯಕರನ್ನು ದೇಶದ ರಾಷ್ಟ್ರೀಯ ನಾಯಕರ ಸ್ಥಾನದಲ್ಲಿ ತರುವ ಸೂತ್ರ ಬದ್ಧ ಯೋಜನೆ ಈರೀತಿ ಪ್ರಗತಿಯಲ್ಲಿದೆ.












