ಸನ್ಮಾರ್ಗ ವಾರ್ತೆ
ಅಂಕಾರ,ಅ.18: ಸಿರಿಯಾದ ಕುರ್ದ್ ಬಂಡುಕೋರರೊಡನೆ ಚರ್ಚೆಗೆ ತಾನಿಲ್ಲ ಎಂದು ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಹೇಳಿದರು.ಆಯುಧ ಕೆಳಗಿಟ್ಟು ಶರಣಾಗಲಿ, ಅಥವಾ ಹಿಂದೆ ಸರಿಯಲಿ ಇದು ಮಾತ್ರ ಅವರಿಗಿರುವ ಏಕೈಕ ದಾರಿ ಎಂದು ಉರ್ದುಗಾನ್ ಹೇಳಿದರು.
ಉತ್ತರ ಸಿರಿಯದ ಕುರ್ದ್ಗಳ ವಿರುದ್ಧ ಸೈನಿಕ ಕ್ರಮವನ್ನು ನಿಲ್ಲಿಸಬೇಕು ಎಂದು ಅಮೆರಿಕ ಸಹಿತ ಹಲವು ದೇಶಗಳು ಟರ್ಕಿ ಮೇಲೆ ಒತ್ತಡ ಹಾಕುತ್ತಿವೆ. ಆದರೆ ಅದನ್ನು ಟರ್ಕಿ ತಿರಸ್ಕರಿಸಿದೆ. ಮಧ್ಯಸ್ಥಿಕೆ ಚರ್ಚೆಗೆ ಬರುವವರಿಗೆ ಟರ್ಕಿಯ ಇತಿಹಾಸದ ಕುರಿತು ಯಾವುದೂ ಗೊತ್ತಿಲ್ಲ. ಕುರ್ದ್ಗಳನ್ನು ಟರ್ಕಿ ಭಯೋತ್ಪಾದಕ ಸಂಘಟನೆ ಎಂದು ಹೇಳುತ್ತಿದೆ.












